ಸಿ.ಡಿ ಶಬ್ದ ಕೇಳಿದರೆ ಸರ್ಕಾರದ ಇಡೀ ಸಂಪುಟ ಬೆಚ್ಚಿ ಬೀಳುತ್ತಿದೆ: ಕಾಂಗ್ರೆಸ್

ಬೆಂಗಳೂರು: ‘ಕುಂಬಳಕಾಯಿ ಕಳ್ಳ ಅಂದರೆ ರಾಜ್ಯ ಬಿಜೆಪಿ ಸಚಿವರೇಕೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದಾರೆ. ಸಿ.ಡಿ ಶಬ್ದ ಕೇಳಿದರೆ ಸರ್ಕಾರದ ಇಡೀ ಸಂಪುಟವೇ ಏಕೆ ಬೆಚ್ಚಿ ಬೀಳುತ್ತಿದೆ’ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಸಚಿವರು ಏಕೆ ಸುದ್ದಿ ಪ್ರಸಾರಕ್ಕೆ ಮುಂಜಾಗ್ರತೆಯಲ್ಲಿ ತಡೆ ತರುತ್ತಿದ್ದಾರೆ? ಸರ್ಕಾರದ ರಚನೆಯಿಂದ ಹಿಡಿದು ಸಂಪುಟ ವಿಸ್ತರಣೆಯವರೆಗೂ ಬೃಹತ್ ಹಗರಣ ಅಡಗಿದೆ’ ಎಂದೂ ಟೀಕಿಸಿದೆ.
‘ಆಪರೇಷನ್ ಕಮಲ’ ಎನ್ನುವುದು ಬಿಜೆಪಿಯ ರಾಜಕೀಯ ವ್ಯಭಿಚಾರ. ಈ ಸರ್ಕಾರ ಮೇಲ್ನೋಟಕ್ಕೆ ಕಾಣುವಷ್ಟು ಸುಲಭದಲ್ಲಿ ರಚನೆಯಾಗಿದ್ದಲ್ಲ. ಭೂಗತಲೋಕ, ಬೆದರಿಕೆ, ಹನಿ ಟ್ರಾಪ್, ಬ್ಲಾಕ್ ಮೇಲ್, ಸಾವಿರಾರು ಕೋಟಿ ಹಣ, ಹೆಣ್ಣು, ಹೆಂಡ ಎಲ್ಲವನ್ನೂ ಬಿಜೆಪಿ ಉಪಯೋಗಿಸಿದ್ದು ದೃಢವಾಗುತ್ತಿದೆ. ಅಧಿಕಾರಕ್ಕಾಗಿ ಬಿಜೆಪಿ ಯಾವ ನೀಚ ಮಟ್ಟಕ್ಕೂ ಇಳಿಯಬಲ್ಲದು ಎಂದೂ ಕಾಂಗ್ರೆಸ್ ಟೀಕಿಸಿದೆ.
ಇವನ್ನೂ ಓದಿ...
ಹಲವರಿಗೆ ನಾವು ಮೈತ್ರಿ ಸರ್ಕಾರ ಕೆಡವಿದ್ದೇವೆ ಎಂಬ ಕೋಪ ಇದೆ: ಎಸ್.ಟಿ.ಸೋಮಶೇಖರ್
ರಾಜಕೀಯ ಷಡ್ಯಂತ್ರ ಆರಂಭ: ತೇಜೋವಧೆ ಮಾಡುವ ಯತ್ನವಿದು –ಸುಧಾಕರ್
ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದ ಮೊರೆ ಹೋದ ಆರು ಸಚಿವರು
ಕುಂಬಳಕಾಯಿ ಕಳ್ಳ ಅಂದರೆ @BJP4Karnataka ಸಚಿವರೇಕೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದಾರೆ?
ಸಿಡಿ ಶಬ್ದ ಕೇಳಿದರೆ ಸರ್ಕಾರದ ಇಡೀ ಸಂಪುಟವೇ ಏಕೆ ಬೆಚ್ಚಿ ಬೀಳುತ್ತಿದೆ?
6 ಸಚಿವರು ಏಕೆ ಸುದ್ದಿ ಪ್ರಸಾರಕ್ಕೆ ಮುಂಜಾಗ್ರತೆಯಲ್ಲಿ ತಡೆ ತರುತ್ತಿದ್ದಾರೆ?
ಸರ್ಕಾರದ ರಚನೆಯಿಂದ ಹಿಡಿದು ಸಂಪುಟ ವಿಸ್ತರಣೆಯವರೆಗೂ ಬೃಹತ್ ಹಗರಣ ಅಡಗಿದೆ.#CDsarkara
— Karnataka Congress (@INCKarnataka) March 6, 2021
"ಆಪರೇಷನ್ ಕಮಲ" ಎನ್ನುವುದು ಬಿಜೆಪಿಯ ರಾಜಕೀಯ ವ್ಯಾಭಿಚಾರ.
ಈ ಸರ್ಕಾರ ಮೇಲ್ನೋಟಕ್ಕೆ ಕಾಣುವಷ್ಟು ಸುಲಭದಲ್ಲಿ ರಚನೆಯಾಗಿದ್ದಲ್ಲಭುಗತಲೋಕ, ಬೆದರಿಕೆ, ಹನಿಟ್ರಾಪ್, ಬ್ಲಾಕ್ಮೇಲ್, ಸಾವಿರಾರು ಕೋಟಿ ಹಣ, ಹೆಣ್ಣು, ಹೆಂಡ ಎಲ್ಲವನ್ನೂ ಬಿಜೆಪಿ ಉಪಯೋಗಿಸಿದ್ದು ದೃಢವಾಗುತ್ತಿದೆ.
ಅಧಿಕಾರಕ್ಕಾಗಿ @BJP4Karnataka ಯಾವ ನೀಚ ಮಟ್ಟಕ್ಕೂ ಇಳಿಯಬಲ್ಲದು
— Karnataka Congress (@INCKarnataka) March 6, 2021
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.