ಮಂಗಳವಾರ, ಡಿಸೆಂಬರ್ 7, 2021
19 °C

Karnataka Covid-19 Update: ರಾಜ್ಯದಲ್ಲಿ ಇಂದು 349 ಮಂದಿಗೆ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 19 ಸೋಂಕು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿತ್ತು, 22 ಜಿಲ್ಲೆಗಳಲ್ಲಿ 10ಕ್ಕಿಂತ ಹೆಚ್ಚು ಪಾಸಿಟಿವ್‌ ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ 161 ಹೊಸ ಕೋವಿಡ್‌ ಕೇಸ್‌ಗಳನ್ನು ಹೊರತು ಪಡಿಸಿ ಉಳಿದ ಯಾವ ಜಿಲ್ಲೆಗಳಲ್ಲೂ 50ಕ್ಕಿಂತ ಹೆಚ್ಚು ವರದಿಯಾಗಿಲ್ಲ. 

ರಾಜ್ಯದಾದ್ಯಂತ 85,022 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, ಮೈಸೂರಲ್ಲಿ 37, ದಕ್ಷಿಣ ಕನ್ನಡ 24, ಹಾಸನ 24 ಹೊಸ ಪ್ರಕರಣಗಳು ದೃಢ ಪಟ್ಟಿವೆ. ಒಟ್ಟಾರೆ ಇಂದು ರಾಜ್ಯದಾದ್ಯಂತ 349 ಮಂದಿಗೆ ಕೊರೊನಾ ತಗುಲಿದೆ. ಇಲ್ಲಿಯವರೆಗೆ ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 29.84 ಲಕ್ಷ ದಾಟಿದೆ. ಶೇಕಡಾವಾರು ಖಚಿತ ಪ್ರಕರಣಗಳು 0.41%ಕ್ಕೆ ಇಳಿಕೆಯಾಗಿದೆ.

ಬೆಂಗಳೂರು ನಗರದಲ್ಲಿ 5, ಉಡುಪಿಯಲ್ಲಿ 3 ಸೇರಿ ಒಟ್ಟು 14 ಮಂದಿ ಕೊರೊನಾ ಕಾರಣಕ್ಕೆ ಮೃತಪಟ್ಟಿದ್ದಾರೆ. ಒಟ್ಟಾರೆ ಮೃತರ ಶೇಕಡಾವಾರು ಪ್ರಮಾಣ 4.01% ಇದೆ. ಮಂಗಳವಾರ ರಾಜ್ಯದಾದ್ಯಂತ ಆಸ್ಪತ್ರೆಯಿಂದ 399 ಮಂದಿ ಬಿಡುಗಡೆ ಹೊಂದಿದ್ದು, ಇದುವರೆಗೆ ಒಟ್ಟು 29,36,926 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 

ಪ್ರಜಾವಾಣಿ - ಡೆಕ್ಕನ್ ಹೆರಾಲ್ಡ್ ಕೋವಿಡ್-19 ಪರಿಹಾರ ನಿಧಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು