ಜಲ ಜೀವನ ಯೋಜನೆ ಜಾರಿ: ಕರ್ನಾಟಕ ಸಾಧನೆ ಕಳಪೆ

ದೇಶದ ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೂ ಪ್ರತಿನಿತ್ಯ 55 ಲೀಟರ್‌ನಷ್ಟು ನೀರನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2019ರಲ್ಲಿ ಆರಂಭಿಸಿದ್ದ ‘ಜಲ ಜೀವನ ಮಿಷನ್’ ಯೋಜನೆಯ ಅನುಷ್ಠಾನವು ಕರ್ನಾಟಕದಲ್ಲಿ ಅತ್ಯಂತ ನಿರಾಶಾದಾಯಕವಾಗಿದೆ.
2019ರ ಆಗಸ್ಟ್ 15ರಂದು ಯೋಜನೆ ಆರಂಭವಾದಾಗ ದೇಶದಲ್ಲಿ (ಗ್ರಾಮೀಣ ಪ್ರದೇಶ) ಶೇ 16ರಷ್ಟು ಮನೆಗಳಿಗಷ್ಟೇ ನಲ್ಲಿ ನೀರಿನ ಸಂಪರ್ಕವಿತ್ತು. ಈಗ ಇದರ ಪ್ರಮಾಣ ಶೇ 32.96ರಷ್ಟಿದೆ. ಆದರೆ, ಇದೇ ಅವಧಿಯಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ನಲ್ಲಿ ನೀರಿನ ಸಂಪರ್ಕದ ಪ್ರಮಾಣವು ಶೇ 26.88ರಿಂದ ಶೇ 28.55ರಷ್ಟಕ್ಕೆ ಮಾತ್ರ ಏರಿಕೆಯಾಗಿದೆ.
ಯೋಜನೆ ಸರಿಯಾಗಿ ಅನುಷ್ಠಾನವಾಗದ ಎಲ್ಲಾ ರಾಜ್ಯಗಳ ಪಂಚಾಯಿತಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಯೋಜನೆಯನ್ನು ಅನುಷ್ಠಾನ ಮಾಡಲು ಸಹಕಾರ ನೀಡುವಂತೆ ಕೋರಿದ್ದಾರೆ.
ದಕ್ಷಿಣ ಕನ್ನಡ ಮುಂದು: ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಅತ್ಯಧಿಕ ಸಂಖ್ಯೆಯಲ್ಲಿ (36,466) ನಲ್ಲಿ ನೀರಿನ ಸಂಪರ್ಕಗಳನ್ನು ನೀಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ (66) ಸಂಪರ್ಕಗಳನ್ನು ನೀಡಲಾಗಿದೆ.
ಗರಿಷ್ಠ ಪ್ರಮಾಣದಲ್ಲಿ ನಲ್ಲಿ ನೀರಿನ ಸಂಪರ್ಕ ಇರುವ ಕುಟುಂಬಗಳಿರುವ ಜಿಲ್ಲೆಗಳ ಪಟ್ಟಿಯಲ್ಲಿ ಮಂಡ್ಯ (ಶೇ 55.93) ಮೊದಲ ಸ್ಥಾನದಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯು (ಶೇ 52.40) ಎರಡನೇ ಸ್ಥಾನದಲ್ಲಿವೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.