ಗುರುವಾರ , ಅಕ್ಟೋಬರ್ 6, 2022
23 °C

ಕರ್ನಾಟಕ ಲೇಖಕಿಯರ ಸಂಘಕ್ಕೆ ಕವಯತ್ರಿ ಪುಷ್ಪಾ ಅಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕವಯತ್ರಿ ಎಚ್‌.ಎಲ್. ಪುಷ್ಪಾ ಜಯಶೀಲರಾಗಿದ್ದಾರೆ.

ಬೆಂಗಳೂರಿನ ಎನ್.ಆರ್. ಕಾಲೊನಿಯಲ್ಲಿರುವ ಬಿ.‌ಎಂ.ಶ್ರೀ. ಪ್ರತಿಷ್ಠಾನದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹಾಲಿ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಹಾಗೂ ಪುಷ್ಪಾ ಅವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ 62 ಮತಗಳ ಅಂತರದಿಂದ ಪುಷ್ಪಾ ವಿಜೇತರಾಗಿ ಹೊರಹೊಮ್ಮಿದರು. 

ಎಚ್‌.ಎಲ್. ಪುಷ್ಪಾ 342, ವನಮಾಲಾ ಸಂಪನ್ನಕುಮಾರ್ 280 ಹಾಗೂ ಶೈಲಜಾ ಸುರೇಶ್ 33 ಮತಗಳನ್ನು ಪಡೆದಿದ್ದಾರೆ.

ಸಂಘದ 1,330 ಸದಸ್ಯರಲ್ಲಿ 1,295 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ಜಿಲ್ಲೆಗಳಲ್ಲಿ ಸದಸ್ಯರು ಅಂಚೆಗಳ ಮೂಲಕ ಮತ ಚಲಾಯಿಸಿದ್ದರು. ಬೆಂಗಳೂರಿನಲ್ಲಿ 650 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ರಾಜ್ಯದ ಎಲ್ಲೆಡೆಯಿಂದ 699 ಮತಗಳು ಚಲಾವಣೆಯಾಗಿದ್ದವು. 44 ಮತಗಳು ತಿರಸ್ಕರಿಸಲ್ಪಟ್ಟಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು