ಬುಧವಾರ, ಏಪ್ರಿಲ್ 14, 2021
31 °C

ಬಿಜೆಪಿ ಸರ್ಕಾರ ಈಗ ಹರಿದ ಬನಿಯನ್‌: ಕಾಂಗ್ರೆಸ್‌ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್‌–ಬಿಜೆಪಿ ನಡುವಿನ ಟ್ವೀಟ್‌ ಸಮರ ಗುರುವಾರವೂ ಮುಂದುವರಿದಿದೆ.

‘ಬಿಜೆಪಿಯವರ ಮಾತು ಕೇಳಿದಾಗಳೆಲ್ಲ ಸುಳ್ಳು ಮೊದಲು ಹುಟ್ಟಿದ್ದೋ, ಬಿಜೆಪಿಯೇ ಮೊದಲು ಹುಟ್ಟಿದ್ದೋ? ಅನುಮಾನ ಮೂಡುತ್ತದೆ. ಎಳೆ ಕೂಸು ಸಂಸದ ತೇಜಸ್ವಿ ಸೂರ್ಯ ಅವರೇ ಶಾಸಕ ರವಿ ಸುಬ್ರಹ್ಮಣ್ಯ ಅವರು ನಿಮ್ಮ ಚಿಕ್ಕಪ್ಪ ಅಲ್ಲವೇ?! ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

‘ಕುಟುಂಬ ರಾಜಕಾರಣವೇ ಇಲ್ಲ ಎಂದು ರಾಜಾರೋಷವಾಗಿ ಸುಳ್ಳು ಹೇಳುವ ಬಿಜೆಪಿಯವರೇ, ನಿಮ್ಮವರ ಡಿಎನ್‌ಎ ಪರೀಕ್ಷೆ ಮಾಡಿಸೋಣವೇ? ಅನುಮಾನ ಬಗೆಹರಿದುಬಿಡಲಿ!’ ಎಂದು ಬಿಜೆಪಿಗೆ ಕಾಂಗ್ರೆಸ್‌ ಸವಾಲು ಹಾಕಿದೆ.

ಇದನ್ನೂ ಓದಿ... ಈಶ್ವರಪ್ಪ ರಾಜ್ಯಪಾಲರ ಅಂಗಳಕ್ಕೆ ಹೋಗಿದ್ದು ಸರಿಯಲ್ಲ: ಬಸವರಾಜ ಬೊಮ್ಮಾಯಿ

‘ರಾಜ್ಯ ಬಿಜೆಪಿ ಸರ್ಕಾರ ಈಗ ‘ಹರಿದ ಬನಿಯನ್’ ಅತ್ತ ಎಳೆದರೆ ಇತ್ತ ತೋರುತ್ತದೆ, ಇತ್ತ ಎಳೆದರೆ ಅತ್ತ ತೋರುತ್ತದೆ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

‘ರೇಪಿಸ್ಟ್ ಜನತಾ ಪಾರ್ಟಿಯ ಹೊಸ ನೀತಿಯ ಪ್ರಕಾರ, ‘ಸಂತ್ರಸ್ತೆಯ ಸಹಾಯಕ್ಕೆ ನಿಲ್ಲುವವರು ತಪ್ಪಿತಸ್ಥರು!, ಆರೋಪಿಯ ರಕ್ಷಣೆಗೆ ನಿಲ್ಲುವ ಬಿಜೆಪಿಗರು ಸುಭಗರು!' ಎಂದು ಕಿಡಿಕಾರಿದೆ.

‘ಶಾಸಕ ಯತ್ನಾಳ್ ಸರ್ಕಾರದಲ್ಲಿನ ಎಲ್ಲಾ ಅನಾಚಾರಗಳನ್ನೂ ಜಗತ್ತಿಗೆ ತಿಳಿಸಿದ್ದರು. ಮಾಧುಸ್ವಾಮಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ನಡೆಯ ವಿರುದ್ಧ ಹರಿಹಾಯ್ದಿದ್ದರು. ಈಶ್ವರಪ್ಪ ಸಿಎಂ ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರವನ್ನ ಬಯಲಿಗಿಟ್ಟಿದ್ದಾರೆ. ಬಿಜೆಪಿ ಸರ್ಕಾರದ ಸ್ಥಿತಿ ಎಷ್ಟೇ ಎಳೆದರೂ ಮೈಮುಚ್ಚದ ‘ಹರಿದ ಬನಿಯನ್’ನಂತಾಗಿದೆ!’ ಎಂದು ಕಾಂಗ್ರೆಸ್‌ ಮತ್ತೊಂದು ಟ್ವೀಟ್‌ ಮಾಡಿದೆ.

ಇದನ್ನೂ ಓದಿ... ಈಶ್ವರಪ್ಪ ಲೆಟರ್‌ ಬಾಂಬ್‌: ಯಡಿಯೂರಪ್ಪ ವಿರುದ್ಧ ರಾಜ್ಯಪಾಲ, ವರಿಷ್ಠರಿಗೆ ದೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು