ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸ್ಥಾನಕ್ಕೆ ಡಿಕೆಶಿ ಲಾಬಿ, ಸಿದ್ದುಗೆ ಒಂಟಿತನ ಕಾಡುತ್ತಿದೆ: ಬಿಜೆಪಿ ವ್ಯಂಗ್ಯ

ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಏಕಾಂಗಿತನ ಕಾಡುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಬಣ ರಾಜಕೀಯವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್‌ನಲ್ಲಿ ಈಗ ಎಲ್ಲರೂ ಸಿಎಂ ಅಭ್ಯರ್ಥಿಗಳೇ. ಡಿಕೆಶಿ ಅವರಿಂದ ಸಿಎಂ ಸ್ಥಾನಕ್ಕೆ ಪ್ರಬಲ ಲಾಬಿ ಎದುರಾಗುತ್ತಿದೆ. #SidduVsDKS ಕಲಹ ಈಗ ಬೇರೆಯೇ ಹಂತ ತಲುಪುತ್ತಿದೆ. ಸಿದ್ದರಾಮಯ್ಯ ವಿರೋಧಿ ಪಾಳಯ ಜಾಗೃತಗೊಂಡಿದೆ’ ಎಂದು ಹೇಳಿದೆ.

’ಕಾಂಗ್ರೆಸ್‌ನಲ್ಲಿ ಡಿಕೆಶಿ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಡಿಕೆಶಿ ವರ್ಚಸ್ಸಿನ ಪ್ರಭಾವ ತಗ್ಗಿಸಲು ಸಿದ್ದರಾಮಯ್ಯ ಹೆಣಗಾಡುತ್ತಿದ್ದಾರೆ. ಇದಕ್ಕಾಗಿ ಶಕ್ತಿ ಪ್ರದರ್ಶನ ಸಮಾರಂಭದ ಸಿದ್ಧತೆ ಆರಂಭವಾಗಿದೆ. ಅಭಿಮಾನಿ ಬಳಗದ ಈ ಸಮಾರಂಭ ಯಾರಿಗೆ ಠಕ್ಕರ್‌ ನೀಡಲು ಆಯೋಜಿಸಲಾಗಿದೆ’ ಎಂದು ಬಿಜೆಪಿ ಗುಡುಗಿದೆ.

‘ಕೈ ನಾಯಕರು ಪದೇ ಪದೇ ದೆಹಲಿಯ ದರ್ಶನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಹತ್ತಿಕೊಂಡ ಕಿಡಿಯನ್ನು ನಕಲಿ ಗಾಂಧಿ ಕುಟುಂಬಕ್ಕೂ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಕಗ್ಗಂಟನ್ನು ಬಗೆ ಹರಿಸಲಾಗದವರು ರಾಜ್ಯದ ಸಿಎಂ ಕುರ್ಚಿಯ ಕಾದಾಟವನ್ನು ಬಗೆಹರಿಸುವರೇ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಜಗತ್ತಿನ ಕಣ್ಣಿಗೆ ಮಣ್ಣೆರೆಚಲು ಡಿಕೆಶಿ ಮತ್ತು ಸಿದ್ದರಾಮಯ್ಯ ಒಂದೇ ಕಾರಿನಲ್ಲಿ ಬರುವುದೇನು, ಜೊತೆಯಾಗಿ ಎತ್ತಿನ ಗಾಡಿ ಓಡಿಸುವುದೇನು, ಚಿಂತನ ಶಿಬಿರದಲ್ಲಿ ಫೋಟೊಗೆ ಫೋಸ್‌ ಕೊಟ್ಟಿದ್ದೇನು..! ಮುಖವಾಡ ಕಳಚುತ್ತಿದೆ, ಸೃಷ್ಟಿಯಾದ ಕಂದಕ ಲೋಕಕ್ಕೆ ಸಾರಿ ಸಾರಿ ಹೇಳುತ್ತಿದೆ, ಇದು #SidduVsDKS ಕದನವೆಂದು. ಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡವಾಗಿದೆ’ ಎಂದು ಬಿಜೆಪಿ ಆರೋಪಿಸಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT