ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಗಾಂಧಿ ಗೆದ್ದಿದ್ದು ಭ್ರಷ್ಟಾಚಾರದಿಂದ, ಗಾಂಧಿವಾದದಿಂದಲ್ಲ: ಬಿಜೆಪಿ

Last Updated 2 ಡಿಸೆಂಬರ್ 2022, 11:30 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಭ್ರಷ್ಟಾಚಾರಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಾರಂಟ್‌ ಇಲ್ಲದೇ ಬಂಧಿಸಬಹುದಾಗಿದ್ದು, ಕಾಂಗ್ರೆಸ್ಸಿಗರಲ್ಲಿ ಎದೆ ನಡುಗಲಾರಂಭಿಸಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಭ್ರಷ್ಟಾಚಾರ ಹಾಗೂ ಇ.ಡಿ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ನ ಖಾವೂಂಗಾ, ನ ಖಾನೆ ದೂಂಗಾ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಇನ್ನಷ್ಟು ಬಲ ಬಂದಂತಾಗಿದೆ’ ಎಂದು ಹೇಳಿದೆ.

‘ಇಷ್ಟಾಗಿ ಇಂದಿರಾ ಗಾಂಧಿ ಚುನಾವಣೆ ಗೆದಿದ್ದು ಭ್ರಷ್ಟಾಚಾರದಿಂದಲ್ಲದೇ ಗಾಂಧಿವಾದದಿಂದಲ್ಲ. ಯಂಗ್ ಇಂಡಿಯಾ ಮೂಲಕ ನ್ಯಾಷನಲ್ ಹೆರಾಲ್ಡ್ ಎಂಬ ಬಹುಕೋಟಿ ಹಗರಣದಆಶ್ರಯದಾತೆ ಸೋನಿಯಾ. ಇಂಥ ಭ್ರಷ್ಟಾಚಾರಿಗಳ ಬಾಯಲ್ಲೂ ಭ್ರಷ್ಟಾಚಾರ ವಿರೋಧ ಬರುವಂತಾಗಿದ್ದಕ್ಕೆ ಡಿ.ಕೆ.ಶಿವಕುಮಾರ್ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಬೇಕು’ ಎಂದು ಬಿಜೆಪಿ ಲೇವಡಿ ಮಾಡಿದೆ.

‘ತಾನೇ ಚಾಣಕ್ಯ ಎಂಬ ಭ್ರಮೆಯಲ್ಲಿದ್ದ ಡಿ.ಕೆ.ಶಿವಕುಮಾರ್, ಜೈಲಿಗೆ ಹೋಗಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಯಲ್ಲ. ಇದೇ ಭ್ರಷ್ಟಾಚಾರದಿಂದ. 20 ಬ್ಯಾಂಕಿನಲ್ಲಿ ₹200 ಕೋಟಿ ಹೂತಿಟಿದ್ದು, ಅವರ ಆದಾಯ 800 ಪಟ್ಟು ಹೆಚ್ಚಾಗಿರೋದು ಭ್ರಷ್ಟಾಚಾರದಿಂದ. ಭ್ರಷ್ಟಾಚಾರದ ಬಗ್ಗೆ ಖುದ್ದು ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚಂದ!’ ಎಂದು ಕಿಡಿಕಾರಿದೆ.

‘ನಿಮ್ಮದೇ ಪಕ್ಷದ ಇನ್ನೊಬ್ಬ ಮಹಾಪುರುಷ ಎಂ.ಬಿ.ಪಾಟೀಲ ನೀರಾವರಿ ಸಚಿವರಾಗಿದ್ದಾಗ ಧಾರವಾಡದ ಜನರ ನೀರ ದಾಹದಲ್ಲೂ ದುಡ್ಡು ಹೊಡೆದರು. ಮಲಪ್ರಭಾ ಕಾಲುವೆ ಆಧುನೀಕರಣ ಕಾಮಗಾರಿಯಲ್ಲಿ ₹400 ಕೋಟಿ ಲಪಟಾಯಿಸಿದ್ದು ಭ್ರಷ್ಚಾಚಾರ. ₹159 ಕೋಟಿ ನೀರಾವರಿ ಯೋಜನೆಗಳಿಗೆ ₹25 ಕೋಟಿ ಕಿಕ್ ಬ್ಯಾಕ್ ಪಡೆದಿದ್ದರಂತೆ. ಡಿಕೆಶಿ ಅವರೇ ಅದು ಭಷ್ಟಾಚಾರವಲ್ಲವೆ?’ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT