ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರು ರಾಷ್ಟ್ರ ಧ್ವಜವನ್ನು ಕರ್ಚಿಫ್‌ನಂತೆ ಭಾವಿಸಿದ್ದಾರೆ: ಕಾಂಗ್ರೆಸ್ ಕಿಡಿ

Last Updated 9 ಆಗಸ್ಟ್ 2022, 7:16 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯವರು ರಾಷ್ಟ್ರ ಧ್ವಜವನ್ನು ಕರ್ಚಿಫ್‌ನಂತೆ ಭಾವಿಸಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ರಾಷ್ಟ್ರ ಧ್ವಜ ವಿಚಾರವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸ್ವಾಭಿಮಾನದ ಸಂಕೇತವಾದ ತಿರಂಗಾಕ್ಕೆ ಅದರದ್ದೇ ಗೌರವ, ನೀತಿ, ನಿಯಮಗಳಿವೆ. ಜನ ಸಾಮಾನ್ಯರು ದೋಷಪೂರಿತ ಧ್ವಜಗಳನ್ನು ಹಾರಿಸಿದಲ್ಲಿ ಅದರ ಹೊಣೆಯನ್ನು, ಅವರ ಪಾಲಿನ ಶಿಕ್ಷೆಯನ್ನು ಬಿಜೆಪಿ ಹೊರುತ್ತದೆಯೇ? ಧ್ವಜವನ್ನು ಟವೆಲ್‌ಗಿಂತಲೂ ಕಳಪೆಯಾಗಿ ತಯಾರಿಸಿದವರಿಗೆ ಯಾವ ಶಿಕ್ಷೆ ವಿಧಿಸಬೇಕು’ ಎಂದು ಪ್ರಶ್ನಿಸಿದೆ.

‘ದೇಶಭಕ್ತಿಯನ್ನು ವ್ಯಾಪಾರದ ಸರಕು ಎಂದುಕೊಂಡಿರುವ ಬಿಜೆಪಿ ಎಂಬ ಗಾಂಪರ ಗುಂಪು ತೆಗೆದುಕೊಳ್ಳುವ ನಿರ್ಧಾರಗಳಿಗೆ ರಾಷ್ಟ್ರಧ್ವಜದ ಘನತೆ ಮಣ್ಣು ಪಾಲಾಗಿದೆ. ಲಕ್ಷಾಂತರ ದೋಷಪೂರಿತ ರಾಷ್ಟ್ರಧ್ವಜಗಳನ್ನು ವಿತರಿಸಿದವರಿಗೆ ಯಾವ ಶಿಕ್ಷೆ? ಕೇವಲ ವ್ಯಾಪಾರಕ್ಕಾಗಿ ಗೌರವದ ಸಂಕೇತವಾದ ಧ್ವಜಕ್ಕೆ ಅಪಚಾರ ಎಸಗುತ್ತಿರುವುದು ಸಹಿಸಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರವರೆಗೆ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗ ಅಭಿಯಾನ ಹಮ್ಮಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕರೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ದೇಶದ ಹಲವೆಡೆ ರಾಷ್ಟ್ರಧ್ವಜವನ್ನು ವಿತರಿಸಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT