ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೇಸಿಎಂ’ ಅಭಿಯಾನ: ಕಾಂಗ್ರೆಸ್‌ನಿಂದ ರಾಜ್ಯದ ಘನತೆ ಮಣ್ಣುಪಾಲು -ಸುಧಾಕರ್‌ ಟೀಕೆ

Last Updated 25 ಸೆಪ್ಟೆಂಬರ್ 2022, 6:15 IST
ಅಕ್ಷರ ಗಾತ್ರ

ಬೆಂಗಳೂರು: ‘ಪೇಸಿಎಂ’ ಅಭಿಯಾನದ ಮೂಲಕ ಕಾಂಗ್ರೆಸ್‌ ನಾಯಕರು ರಾಜ್ಯದ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ. ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಕಾಂಗ್ರೆಸ್‌ ನಾಯಕರು ವೈಯಕ್ತಿಕ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆ‘ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಟೀಕಿಸಿದ್ದಾರೆ.

‘ಕಾಂಗ್ರೆಸ್‌ನವರು ಮೂಲಕ, ಕೀಳುಮಟ್ಟದ ರಾಜಕೀಯ ಮಾಡುವುದರಲ್ಲಿ ನಿಸ್ಸೀಮರೆಂದು ಸಾಬೀತು ಮಾಡಿದ್ದಾರೆ. ಆದರೆ, ಏನೇ ಮಾಡಿದರೂ ಅವರು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಪದೇ ಪದೇ ಶೇ 40 ಕಮಿಷನ್‌ ಬಗ್ಗೆ ಹೇಳಿದರೆ ಜನರು ನಂಬುತ್ತಾರೆಂದು ಕಾಂಗ್ರೆಸ್‌ ತಿಳಿದಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಶುದ್ಧ ಆಡಳಿತ ಜನರಿಗೆ ತಿಳಿದಿದೆ. ಜನಸಾಮಾನ್ಯರ ಸಿ.ಎಂ ಎಂದು ಗುರುತಿಸಿಕೊಂಡಿರುವ ಅವರು, ಒಳ್ಳೆಯ ಆಡಳಿತ ನೀಡುತ್ತಿರುವುದನ್ನು ಸಹಿಸಲು ಕಾಂಗ್ರೆಸ್‌ಗೆ ಆಗುತ್ತಿಲ್ಲ. ಮಾಜಿ ಸಿ.ಎಂವೊಬ್ಬರು ಭಿತ್ತಿಪತ್ರ ಅಂಟಿಸುವುದನ್ನು 75 ವರ್ಷಗಳ ಇತಿಹಾಸದಲ್ಲೇ ನೋಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT