ಶುಕ್ರವಾರ, ಮೇ 14, 2021
25 °C

ಆರ್. ಅಶೋಕ್ ಹೃದಯ ಗೆದ್ದ ಜನಪದ ಗೀತೆ, ನೃತ್ಯ,‌ ಸಂಗ್ಯಾ ಬಾಳ್ಯಾ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಛಬ್ಬಿ (ಹುಬ್ಬಳ್ಳಿ): ಕಂದಾಯ ಸಚಿವ ಆರ್. ಅಶೋಕ ಅವರ ಗ್ರಾಮ ವಾಸ್ತವ್ಯ ಹಾಗೂ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ರಂಗಾಯಣದಿಂದ ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಛಬ್ಬಿ ಗ್ರಾಮ ವಾಸ್ತವ್ಯಕ್ಕೆ ಮೆರುಗು ತಂದವು.

ಹರ್ಲಾಪೂರದ ಸಿ.ವೈ.ಸಿ.ಡಿ ತಂಡವು ಮಾನವೀಯ ಮೌಲ್ಯಗಳನ್ನು ಸಾರುವ ಜಾನಪದ ಮತ್ತು ಜಾಗೃತಗೀತೆಗಳನ್ನು ಪ್ರಸ್ತುತ ಪಡಿಸಿತು.

ಓದಿ: 

ಜನಪದ ನೃತ್ಯ, ಚಿಕ್ಕ ಮಕ್ಕಳ ನೃತ್ಯ ಹಾಗೂ ಗ್ರಾಮದ ಮಹಿಳೆಯರು ಭಜನೆ ಗೀತೆ ಹಾಡಿದರು. ಸಿರಿ ಅವರಿಂದ ಭರತನಾಟ್ಯ ಹಾಗೂ ಸೋಬಾನ ಗೀತೆಗಳು ಕಾರ್ಯಕ್ರಮಕ್ಕೆ ಹುರುಪು ತಂದವು.

ಗ್ರಾಮದ ಕಲಾತಂಡ ಸಂಗ್ಯಾ ಬಾಳ್ಯ ನಾಟಕ ಪ್ರಸ್ತುತ ಪಡಿಸಿತು. ಜಾನಪದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಜನಪದ ನೃತ್ಯ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯಿಂದ ಜಾಗೃತಿ ಬೀದಿ ನಾಟಕ ನಡೆಯಿತು.

ನೋಡಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು