ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸಾಹಿತ್ಯ ಅಕಾಡೆಮಿ: ಪ್ರೊ.ಅಮೃತ ಸೋಮೇಶ್ವರ ಸೇರಿ ಐವರಿಗೆ ಗೌರವ ಪ್ರಶಸ್ತಿ

Last Updated 26 ಫೆಬ್ರುವರಿ 2021, 10:58 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನೀಡಲಾಗುವ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗಳು, ಸಾಹಿತ್ಯಶ್ರೀ ಪ್ರಶಸ್ತಿ, ಪುಸ್ತಕ ಬಹುಮಾನಗಳು, ದತ್ತಿ ಬಹುಮಾನಗಳು ಪ್ರಕಟಗೊಂಡಿವೆ.

2020ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳನ್ನು ಐದು ಜನ ಸಾಹಿತಿಗಳಿಗೆ ನೀಡಲಾಗುತ್ತಿದೆ. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಬಹುಮಾನ ಒಳಗೊಂಡಿರುತ್ತದೆ.

ಪ್ರೊ. ಅಮೃತ ಸೋಮೇಶ್ವರ, ವಿದ್ವಾನ್‌,ಷಣ್ಮುಖಯ್ಯ ಅಕ್ಕೂರಮಠ, ಡಾ.ಕೆ.ಕೆಂಪೇಗೌಡ, ಡಾ.ಕೆ.ಆರ್‌.ಸಂಧ್ಯಾರೆಡ್ಡಿ, ಅಶೋಕಪುರಂ ಕೆ.ಗೋವಿಂದರಾಜು ಅವರಿಗೆ ವರ್ಷದ ಗೌರವ ಪ್ರಶಸ್ತಿ ನೀಡಲಾಗುತ್ತಿದೆ.

10 ಜನ ಸಾಧಕರಿಗೆ 'ಸಾಹಿತ್ಯಶ್ರೀ': ಪ್ರೇಮಶೇಖರ್‌, ಡಾ.ರಾಜಪ್ಪ ದಳವಾಯಿ, ಬಿ.ಟಿ.ಜಾಹ್ನವಿ, ಪ್ರೊ.ಕಲ್ಯಾಣರಾವ್‌ ಜಿ.ಪಾಟೀಲ್‌, ಡಾ.ಜೆ.ಪಿ.ದೊಡ್ಡಮನಿ, ಡಾ.ಮೃತ್ಯುಂಜಯ ರುಮಾಲೆ, ಡಿ.ವಿ.ಪ್ರಹ್ಲಾದ್‌, ಡಾ.ಎಂ.ಎಸ್‌.ಆಶಾದೇವಿ, ಶಿವಾನಂದ ಕಳವೆ, ವೀಣಾ ಬನ್ನಂಜೆ. ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು ಬಹುಮಾನ ಒಳಗೊಂಡಿರುತ್ತದೆ.

2019ರಲ್ಲಿ ಪ್ರಕಟವಾದ ವಿವಿಧ 18 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವರ್ಷದ ಅತ್ಯುತ್ತಮ ಕೃತಿ ಬಹುಮಾನ ನೀಡಲಾಗುತ್ತಿದೆ. ವಸುಧೇಂದ್ರ ಅವರ ಕಾದಂಬರಿ 'ತೇಜೋ ತುಂಗಭದ್ರಾ', ಸತ್ಯಮಂಗಲ ಮಹಾದೇವ ಅವರ ಕಾವ್ಯ ಸಂಕಲನ 'ಪಂಚವರ್ಣದ ಹಂಸ', ಲಕ್ಷ್ಮಣ ಬಾದಾಮಿ ಅವರ 'ಒಂದು ಚಿಟಿಕೆ ಮಣ್ಣು' ಸಣ್ಣಕತೆ, ಉಷಾ ನರಸಿಂಹನ್‌ ಅವರ ನಾಟಕ 'ಕಂಚುಗನ್ನಡಿ', ರಘುನಾಥ ಚ.ಹ. ಅವರ 'ಬೆಳ್ಳಿತೊರೆ' ಲಲಿತ ಪ್ರಬಂಧ ಹಾಗೂ ನವಕವಿಗಳ ಪ್ರಥಮ ಸಂಕಲನ ಪ್ರಕಾರದಲ್ಲಿ ಸುಮಿತ್ ಮೇತ್ರಿ ಅವರ 'ಥಟ್‌ ಅಂತ ಬರೆದುಕೊಡುವ ರಶೀದಿಯಲ್ಲ ಕವಿತೆ' ಕೃತಿ ಸೇರಿ ಒಟ್ಟು 18 ಕೃತಿಗಳಿಗೆ ಬಹುಮಾನ ದೊರೆತಿದೆ.

ಪುಸ್ತಕ ಬಹುಮಾನವು ₹25 ಸಾವಿರ ನಗದು ಬಹುಮಾನ ಒಳಗೊಂಡಿದೆ.

2019ನೇ ವರ್ಷದ ಅಕಾಡೆಮಿಯ 9 ದತ್ತಿ ಬಹುಮಾನಗಳನ್ನೂ ಪ್ರಕಟಿಸಲಾಗಿದೆ. ಅನುಪಮಾ ಪ್ರಸಾದ್‌, ನೀತಾ ರಾವ್‌, ಪ್ರಮೋದ್‌ ಮುತಾಲಿಕ್‌ ಸೇರಿದಂತೆ 9 ಜನರ ಕೃತಿಗಳಿಗೆ ದತ್ತಿ ಬಹುಮಾನ ನೀಡಲಾಗುತ್ತಿದೆ.

ವರ್ಷದ ಗೌರವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ

2020ನೇ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ

2019ನೇ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರ ಪಟ್ಟಿ ಇಲ್ಲಿದೆ

2019ನೇ ವರ್ಷದ ಅಕಾಡೆಮಿಯ 9 ದತ್ತಿ ಬಹುಮಾನ ಪುರಸ್ಕೃತರ ಪಟ್ಟಿ ಇಲ್ಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT