ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: 25,702 ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆಯಲ್ಲಿ ಶೇ 100

157 ವಿದ್ಯಾರ್ಥಿಗಳಿಗೆ 625 ಅಂಕ
Last Updated 9 ಆಗಸ್ಟ್ 2021, 11:10 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 157 ವಿದ್ಯಾರ್ಥಿಗಳು 625ಕ್ಕೆ 625 ಅಂಕವನ್ನು ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 8,71,443 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿನಿ ಹೊರತುಪಡಿಸಿ ಉಳಿದೆಲ್ಲರೂ ತೇರ್ಗಡೆಯಾಗಿದ್ದಾರೆ.

25,702 ವಿದ್ಯಾರ್ಥಿಗಳು ಪ್ರಥಮ ಭಾಷೆಯಲ್ಲಿ ಶೇ 100 ಅಂಕ ಗಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 25,702 ವಿದ್ಯಾರ್ಥಿಗಳು ಪ್ರಥಮ ಭಾಷೆಯ ಪರೀಕ್ಷೆಯಲ್ಲಿ ಗರಿಷ್ಠ 125 ಅಂಕಗಳಿಗೆ 125 ಅಂಕಗಳನ್ನು ಗಳಿಸಿದ್ದಾರೆ. ದ್ವಿತೀಯ ಭಾಷೆಯಲ್ಲಿ 36,628, ತೃತೀಯ ಭಾಷೆಯಲ್ಲಿ 36,776, ಗಣಿತದಲ್ಲಿ 6,321, ವಿಜ್ಞಾನದಲ್ಲಿ 3,649, ಸಮಾಜ ವಿಜ್ಞಾನ ವಿಷಯದಲ್ಲಿ 9,367 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

ಎಲ್ಲ ಜಿಲ್ಲೆಗಳಿಗೆ ‘ಎ’ ಗ್ರೇಡ್‌

ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ‘ಎ’ ಗ್ರೇಡ್‌ ಪಡೆದಿವೆ. ಶೇ 75ರಿಂದ ಶೇ 100ರಷ್ಟು ಫಲಿತಾಂಶವನ್ನು ಪಡೆದಿವೆ. 204 ತಾಲ್ಲೂಕುಗಳ ಪೈಕಿ ಒಂದು ತಾಲ್ಲೂಕು ಮಾತ್ರ ‘ಬಿ' ಗ್ರೇಡ್‌ (ಶೇ 60ರಿಂದ ಶೇ 75) ಪಡೆದಿದೆ.

http://sslc.karnataka.gov.in/ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು.

ಫಲಿತಾಂಶದಲ್ಲಿ ಶ್ರೇಣಿ:

* ಎ + ಶ್ರೇಣಿಯಲ್ಲಿ 1,28,931 (ಶೇ.16.25) ವಿದ್ಯಾರ್ಥಿಗಳು
* ಎ ಶ್ರೇಣಿಯಲ್ಲಿ 2,50,317 (ಶೇ 32) ವಿದ್ಯಾರ್ಥಿಗಳು
* ಬಿ ಶ್ರೇಣಿಯಲ್ಲಿ 2,87,684 (ಶೇ.36.86) ವಿದ್ಯಾರ್ಥಿಗಳು
* ಸಿ ಶ್ರೇಣಿಯಲ್ಲಿ 1,13,610 (ಶೇ.14.55) ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT