ಬುಧವಾರ, ಮಾರ್ಚ್ 3, 2021
18 °C

ಮತ್ತೆ ಖಾತೆ ಅದಲು– ಬದಲು: ಸುಧಾಕರ್‌ಗೆ ವೈದ್ಯಕೀಯ; ಮಾಧುಸ್ವಾಮಿಗೆ ಪ್ರವಾಸೋದ್ಯಮ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

JC Madhuswamy DH Photo

ಬೆಂಗಳೂರು: ಖಾತೆ ಮರು ಹಂಚಿಕೆಯಿಂದ ಉಂಟಾಗಿರುವ ಅಸಮಾಧಾನ ಶಮನಗೊಳಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ  ಡಾ.ಕೆ. ಸುಧಾಕರ್‌ ಅವರಿಗೆ ಆರೋಗ್ಯ ಖಾತೆಯ ಜೊತೆಗೆ ಮತ್ತೆ ವೈದ್ಯಕೀಯ ಶಿಕ್ಷಣ ಖಾತೆಯ ಹೊಣೆಯನ್ನೂ ವಹಿಸಲು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.

ಕೋವಿಡ್‌ ನಿಭಾಯಿಸಲು ಆರೋಗ್ಯ ಖಾತೆಯ ಜೊತೆಗೆ ವೈದ್ಯಕೀಯ ಖಾತೆಯೂ ಅಗತ್ಯವಿದೆ. ಹೀಗಾಗಿ ಎರಡನ್ನೂ ಒಟ್ಟಿಗಿಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.

ಅಲ್ಲದೆ, ಮಾಧುಸ್ವಾಮಿ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯ ಬದಲು ಪ್ರವಾಸೋದ್ಯಮ ಖಾತೆ ಮತ್ತು ಪರಿಸರ ಖಾತೆ ನೀಡಲು ಮುಂದಾಗಿದ್ದಾರೆ ಆನಂದ್‌ ಸಿಂಗ್‌ ಅವರಿಂದ ವ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ತೆಗೆದು ಅವರಿಗೆ ಮುಖ್ಯಮಂತ್ರಿ ಬಳಿ ಇದ್ದ ಮೂಲಸೌಕರ್ಯ ಮತ್ತು ಮಾಧುಸ್ವಾಮಿ ಬಳಿ ಇದ್ದ ಹಜ್‌ ಮತ್ತು ವಕ್ಫ್ ಖಾತೆ ನೀಡಲು ಬಯಸಿದ್ದಾರೆ ಎನ್ನಲಾಗಿದೆ, ಈ ಬಗ್ಗೆ ರಾಜ್ಯಪಾಲರಿಗೆ ಕಡತ ಕಳುಹಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.

ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಬದಲಾವಣೆಯಿಂದ ಆನಂದ್‌ ಸಿಂಗ್ ತೀವ್ರ ಅಸಮಾಧಾನಗೊಂಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಳಿ ಚರ್ಚೆ ನಡೆಸಿದ್ದಾರೆ. ‘ಅರಣ್ಯ ಖಾತೆ ಬದಲಿಸಿ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಿದ್ದೀರಿ. ಇದೀಗ ಅದನ್ನೂ ಬದಲಾಯಿಸಿದ್ದೀರಿ. ಸಚಿವ ಸ್ಥಾನವೇ ಬೇಡ’ ಎಂದು ರಾಜೀನಾಮೆ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು