ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಲ್ಪ ಸಮಾವೇಶ: ಶಿಸ್ತಿನ ಪಾಠ ಹೇಳಿದ ಕೆಪಿಸಿಸಿ ಅಧ್ಯಕ್ಷ

‘ಹೋರಾಟ ಮತ್ತು ಸಂಘಟನೆಯ ವರ್ಷ’
Last Updated 6 ಜನವರಿ 2021, 21:25 IST
ಅಕ್ಷರ ಗಾತ್ರ

ಬಂಟ್ವಾಳ: ‘ಕಾಂಗ್ರೆಸ್‌ಗೆ 2021 ಹೋರಾಟ ಮತ್ತು ಸಂಘಟನೆಯ ವರ್ಷ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ಕೆಪಿಸಿಸಿ ಹಮ್ಮಿಕೊಂಡ ಮೈಸೂರು ವಿಭಾಗ ಮಟ್ಟದ ‘ಸಂಕಲ್ಪ ಸಮಾವೇಶ’ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪಕ್ಷವನ್ನು ಕೇಡರ್‌ ಬೇಸ್‌ ಆಗಿ ರೂಪಿಸಲಾಗುವುದು. ಕೇವಲ ಚುನಾವಣೆ ಸಂದರ್ಭದಲ್ಲಿ ಕಾಣಿಸಿಕೊಳ್ಳುವವರು ನಾಯಕರಲ್ಲ. ರಾಜಕೀಯವೂ ವ್ಯವಸಾಯದ ಹಾಗೆ. ನಿರಂತರ ಕ್ರಿಯಾಶೀಲತೆ ಬೇಕು. ಪಕ್ಷಕ್ಕೆ ಸಮಯ ನೀಡಲು ಅಸಾಧ್ಯವಾದರೆ, ಬೇರೆಯವರಿಗೆ ಅವಕಾಶ ನೀಡಿ. ಎಐಸಿಸಿ ನಿರ್ದೇಶನದಂತೆ ಹೊಸಬ್ಬರಿಗೆ ಅವಕಾಶ ನೀಡಲಾಗುವುದು. ನಮಗೆ ಫಲಿತಾಂಶ ಬೇಕು’ ಎಂದು ಮುಖಂಡರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷದ ಕೇಡರ್ ಆಧಾರಿತ ಸಮಿತಿ ರಚಿಸಲಾಗುವುದು. ಅಲ್ಲಿ ಮಹಿಳೆ ಸೇರಿದಂತೆ ಎಲ್ಲ ವರ್ಗದವರಿಗೆ ಆದ್ಯತೆ ನೀಡಿ, ಒಬ್ಬರು ಸಾಮಾಜಿಕ ಜಾಲತಾಣ ಸಕ್ರಿಯರೊಬ್ಬರು ಇರುತ್ತಾರೆ’ ಎಂದು ಮಾಹಿತಿ ನೀಡಿದರು.

‘ಕಾರ್ಯಕರ್ತರ ಧ್ವನಿಯೇ ಕೆಪಿಸಿಸಿ ಧ್ಯೇಯವಾಗಲಿದೆ. ಯಾರದೇ ಅಭಿಪ್ರಾಯವನ್ನು ಹೇರುವುದಿಲ್ಲ. ಸ್ಥಳೀಯ ಸಮಸ್ಯೆಗೆ ಸ್ಪಂದಿಸಿ, ಜನರನ್ನು ಭಾವನಾತ್ಮಕವಾಗಿ ತಲುಪಿ. ದೂರ ಹೋದವರನ್ನು ಮನವೊಲಿಸಿ ಕರೆ ತನ್ನಿ’ ಎಂದು ಪದಾಧಿಕಾರಿಗಳಿಗೆ ಹೇಳಿದರು.

ವಿಧಾನ ಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಎಐಸಿಸಿ ಕಾರ್ಯದರ್ಶಿ ವಿಷ್ಣು ನಾದನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ರಮಾನಾಥ ರೈ ಮತ್ತಿತರ ಪ್ರಮುಖರು ಸಭಿಕರ ಸಾಲಿನಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT