ಸೋಮವಾರ, ಸೆಪ್ಟೆಂಬರ್ 26, 2022
20 °C
ಕೆಪಿಟಿಸಿಎಲ್ ನೇಮಕಾತಿ ‌ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ಕ್ರಮ

ಕೆಪಿಟಿಸಿಎಲ್ ನೇಮಕಾತಿ ‌ಪರೀಕ್ಷೆ: ಅಂಗಿಯ ತೋಳಿಗೆ ಕತ್ತರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಭಾನುವಾರ ಇಲ್ಲಿ ‌ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ‌ಪರೀಕ್ಷೆಯಲ್ಲಿ ಪೂರ್ಣ ತೋಳಿನ ಅಂಗಿ ಹಾಕಿಕೊಂಡು ಬಂದ ಅಭ್ಯರ್ಥಿಗಳಿಗೆ ಪರೀಕ್ಷಾ ಸಿಬ್ಬಂದಿ ಕೇಂದ್ರದ ಒಳಗೆ ಅವಕಾಶ ನೀಡಲಿಲ್ಲ.

ಆದ್ದರಿಂದ ಪೂರ್ಣ ತೋಳಿನ ಅಂಗಿ ಧರಿಸಿದ್ದವರು, ತೋಳಿನ ಭಾಗ ಅದನ್ನು ಕತ್ತರಿಸಿ ಹೊರಗಡೆ ಇಟ್ಟು ಪರೀಕ್ಷೆ ಬರೆದಿದ್ದಾರೆ‌. ಕೊಪ್ಪಳದ ಭಾಗ್ಯನಗರದ ನವಚೇತನ ಪಬ್ಲಿಕ್ ಶಾಲೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ಪಿಎಸ್ಐ ನೇಮಕಾತಿ ಅಕ್ರಮದಿಂದಾಗಿ ಇತರೆ ಪರೀಕ್ಷೆಗಳಿಗೆ ಕಟ್ಟುನಿಟ್ಟಿನ ನಿಯಮ ‌ಜಾರಿ‌ ಮಾಡಲಾಗಿದೆ. ಪೂರ್ಣ ತೋಳಿನ ಅಂಗಿ ಧರಿಸದಂತೆ ಪ್ರವೇಶ ಪತ್ರದಲ್ಲಿ ಮೊದಲೇ ಸೂಚಿಸಲಾಗಿತ್ತು. ಆದರೂ, ಕೆಲವರು ಅದೇ ರೀತಿಯ ಅಂಗಿ ಧರಿಸಿ ಬಂದಿದ್ದರು. ಪೂರ್ಣ ತೋಳಿನ ಅಂಗಿ ಬದಲಿಸಲು ಸಿಬ್ಬಂದಿ ಸೂಚಿಸಿದ್ದಾರೆ. ಕೆಲವರು ಹೊಸ ಟೀ ಶರ್ಟ್‌ ಖರೀದಿಸಿದರೆ, ಇನ್ನೂ ಕೆಲವರು ಅಂಗಿಯ ತೋಳಿನ ಭಾಗವನ್ನು ಕತ್ತರಿಸಿ ಕೇಂದ್ರದ ಹೊರಗಿಟ್ಟು ಪರೀಕ್ಷೆ ಬರೆದರು.

ನವಚೇತನ ಪಬ್ಲಿಕ್ ಶಾಲೆಯ ಪ್ರಾಚಾರ್ಯಾರಾದ ಸಂಗೀತಾ ಕಲ್ಲೇಶ, ‘ಪೂರ್ಣ ತೋಳಿನ ಅಂಗಿ ಧರಿಸಿ ಬರಬಾರದು ಎಂದು ಮೊದಲೇ ಸೂಚಿಸಿದ್ದೆವು. ಸೂಚನಾ ಫಲಕವನ್ನು ಹಾಕಿದ್ದೆವು. ಆದರೂ ಅಭ್ಯರ್ಥಿಗಳು ಎಚ್ಚೆತ್ತುಕೊಂಡಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು