ಬೆಂಗಳೂರು: ಕಥಾ ಸಂಕಲನದ ಹಸ್ತಪ್ರತಿಗೆ ‘ಛಂದ ಪುಸ್ತಕ’ವು ನೀಡುವ ಬಹುಮಾನಕ್ಕೆ 2022ನೇ ಸಾಲಿನಲ್ಲಿ ಫಾತಿಮಾ ರಲಿಯಾ ಅವರ ಅಪ್ರಕಟಿತ ಕೃತಿ ಆಯ್ಕೆಯಾಗಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಈ ಬಹುಮಾನ ಸ್ವೀಕರಿಸಲು ಫಾತಿಮಾ ನಿರಾಕರಿಸಿದ್ದಾರೆ.

ದಕ್ಷಿಣ ಕನ್ನಡದ ಪೆರ್ನೆ ಗ್ರಾಮದ ಕತೆಗಾರ್ತಿ ಫಾತಿಮಾ, ಸದ್ಯ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸವಿದ್ದಾರೆ. ಇವರು ಎಂಬಿಎ ಪದವೀಧರರು. ‘ವೈಯಕ್ತಿಕ ಕಾರಣಕ್ಕೆ ಬಹುಮಾನ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೇನೆ. ಈ ವಿಷಯವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದ್ದಾರೆ.

‘ಫಾತಿಮಾ ಖಾಸಗಿ ಕಾರಣಗ ಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಅವರ ಆಯ್ಕೆ ಸ್ವಾತಂತ್ರ್ಯವನ್ನು ಛಂದ ಪುಸ್ತಕ ಗೌರವಿಸುತ್ತದೆ. ಮುಂದಿನ 4 ವಾರಗಳಲ್ಲಿ ನಮ್ಮ ಪರ್ಯಾಯ ಯೋಜನೆಯನ್ನು ತಿಳಿಸುತ್ತೇವೆ. ಛಂದದ ಓದುಗರಿಗೆ ಹೀಗೆ ಗೊಂದಲ ಉಂಟು ಮಾಡುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಛಂದ ಪುಸ್ತಕ ಪ್ರಕಾಶಕರೂ ಆಗಿರುವ ಸಾಹಿತಿ ವಸುಧೇಂದ್ರ ಗುರುವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.