ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷಾರಾಮಿ ಕಾರುಗಳ ಒಡೆಯ ರಾಜೇಶ್‌ ಗೌಡ

ರಾಜೇಶ್‌ ಬಳಿ ₹15.25 ಕೋಟಿ, ಪತ್ನಿ ಡಾ.ತೇಜಸ್ವಿನಿ ಬಳಿ ₹ 4.10 ಕೋಟಿ ಆಸ್ತಿ
Last Updated 16 ಅಕ್ಟೋಬರ್ 2020, 21:26 IST
ಅಕ್ಷರ ಗಾತ್ರ

ಶಿರಾ: ಶಿರಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ. ರಾಜೇಶ್ ಗೌಡ ಐಷಾರಾಮಿ ಕಾರುಗಳ ಪ್ರಿಯರು. ಅವರ ಬಳಿ ₹1.27 ಕೋಟಿ ಹಾಗೂ ₹52 ಲಕ್ಷ ಮೌಲ್ಯದ ಎರಡು ಬಿಎಂಡಬ್ಲ್ಯು ಕಾರುಗಳಿವೆ. ₹34 ಲಕ್ಷ ಮೌಲ್ಯದ ಫೋರ್ಡ್, ₹10.20 ಲಕ್ಷ ಮೌಲ್ಯದ ಹುಂಡೈ ಕಾರು ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ ₹ 9.50 ಲಕ್ಷ ಮೌಲ್ಯದ ಹುಂಡೈ ಕಾರು ಇದೆ.

ರಾಜೇಶ್‌, ₹15.25 ಕೋಟಿ ಒಡೆಯರಾಗಿದ್ದರೆ, ಅವರ ಪತ್ನಿ ಡಾ.ತೇಜಸ್ವಿನಿ ₹4.10 ಕೋಟಿಮೌಲ್ಯದ ಸಂಪತ್ತು ಹೊಂದಿದ್ದಾರೆ. ಚುನಾವಣಾ ಆಯೋಗಕ್ಕೆ ಅವರು ನೀಡಿರುವ ಮಾಹಿತಿಯಂತೆ, ರಾಜೇಶ್‌ ಅವರು 2019-20ನೇ ಸಾಲಿನಲ್ಲಿ ₹2.57 ಕೋಟಿ ಆದಾಯ ಗಳಿಸಿದ್ದಾರೆ. ಪತ್ನಿ ₹48 ಲಕ್ಷ ಆದಾಯ ಹೊಂದಿದ್ದಾರೆ.

ರಾಜೇಶ್ ಗೌಡ ₹9.92 ಕೋಟಿ ಚರಾಸ್ತಿ ಹಾಗೂ ₹5.33 ಕೋಟಿ ಸ್ಥಿರಾಸ್ತಿ ಹೊಂದಿದ್ದರೆ, ಅವರ ಪತ್ನಿ ಬಳಿ ₹2.80 ಕೋಟಿಚರಾಸ್ತಿ ಹಾಗೂ ₹1.30 ಕೋಟಿ ಸ್ಥಿರಾಸ್ತಿ ಇದೆ.

ತಂದೆ, ಪತ್ನಿಯಿಂದ ಸಾಲ: ರಾಜೇಶ್ ಗೌಡ ₹5.33 ಕೋಟಿ ಹಾಗೂ ಅವರ ಪತ್ನಿ ₹1.43 ಕೋಟಿ ಸಾಲ ಮಾಡಿದ್ದಾರೆ. ರಾಜೇಶ್ ಗೌಡ, ತಮ್ಮ ತಂದೆ ಸಿ.ಪಿ.ಮೂಡಲಗಿರಿಯಪ್ಪ ಅವರಿಂದ ₹1 ಕೋಟಿ, ತಾಯಿ ಲಕ್ಷ್ಮಿದೇವಿ ಅವರಿಂದ ₹ 15 ಲಕ್ಷ, ಪತ್ನಿ ತೇಜಸ್ವಿನಿ ಅವರಿಂದ ₹1.43 ಕೋಟಿ, ಸಹೋದರಿ ಡಾ.ಕವಿತಾ ಅವರಿಂದ ₹60.43 ಲಕ್ಷ ಸಾಲ ಪಡೆದಿದ್ದಾರೆ.

ಶಿರಾ ತಾಲ್ಲೂಕಿನ ಚಿರತಹಳ್ಳಿಯಲ್ಲಿ ₹1.11 ಕೋಟಿ ಮೌಲ್ಯದ 33.25 ಎಕರೆ ಕೃಷಿ ಜಮೀನು, ಬೆಂಗಳೂರಿನ ಅಂಚೆಪಾಳ್ಯದಲ್ಲಿ ₹38 ಲಕ್ಷ ಮೌಲ್ಯದ ನಿವೇಶನ, ಕಡಬಗೆರೆಯಲ್ಲಿ ₹ 40 ಲಕ್ಷ ಮೌಲ್ಯದ ನಿವೇಶನ, ಬೆತ್ತನಗೆರೆಯಲ್ಲಿ ₹ 8 ಲಕ್ಷ ಮೌಲ್ಯದ ನಿವೇಶನ, ತುಮಕೂರಿನ ಜಯನಗರದಲ್ಲಿ ₹74 ಲಕ್ಷ ಮೌಲ್ಯದ ನಿವೇಶನವನ್ನು ರಾಜೇಶ್ ಗೌಡ ಹೊಂದಿದ್ದಾರೆ.

ರಾಜೇಶ್ ಗೌಡ ಬಳಿ 500 ಗ್ರಾಂ ಚಿನ್ನ ಹಾಗೂ 1.5 ಕೆ.ಜಿ‌ ಬೆಳ್ಳಿ ಇದ್ದರೆ, ಅವರ ಪತ್ನಿ 2 ಕೆ.ಜಿ ಚಿನ್ನ ಹಾಗೂ 4.8 ಕೆ.ಜಿ ಬೆಳ್ಳಿ ಹೊಂದಿದ್ದಾರೆ.

ಮತ್ತೊಂದು ನಾಮಪತ್ರ ಸಲ್ಲಿಕೆ: ರಾಜೇಶ್ ಗೌಡ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌. ಅಶ್ವಥ್‌ನಾರಾಯಣ್ ಅವರ ಜೊತೆಗೆ ತೆರಳಿ ಚುನಾವಣಾಧಿಕಾರಿಗೆಶುಕ್ರವಾರ ಮತ್ತೊಂದು ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT