ಸೋಮವಾರ, ಸೆಪ್ಟೆಂಬರ್ 20, 2021
21 °C

ನೆರೆ ಸಂತ್ರಸ್ತರ ಕರೆಯಿಂದ ತಲೆನೋವು: ಶಾಸಕ ಕುಮಠಳ್ಳಿ ಮಾತಿಗೆ ಕಾಂಗ್ರೆಸ್‌ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೆರೆ ಸಂತ್ರಸ್ತರ ಕರೆ ಬಂದರೆ ತಲೆನೋವು ಎಂದಿರುವ ಬಿಜೆಪಿ ಶಾಸಕ ಮಹೇಶ್ ಕುಮಠಳ್ಳಿ ಮಾತು ಇಡೀ ಬಿಜೆಪಿ ಧೋರಣೆಯನ್ನು ಬಿಂಬಿಸುತ್ತದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡಿಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, 'ಕಷ್ಟದ ಸಮಯದಲ್ಲಿ ನೆರೆ ಸಂತ್ರಸ್ತರನ್ನು ನಡುನೀರಲ್ಲಿ ಕೈಬಿಟ್ಟು ದೆಹಲಿಯಲ್ಲಿ ಕುರ್ಚಿ ಲಾಬಿ ನಡೆಸಲು ಹೋಗಿರುವ ಬಿಜೆಪಿ ನಾಯಕರಿಗೆ ಅಧಿಕಾರ ಲಾಲಸೆ ಒಂದೇ ಅಜೆಂಡಾ' ಎಂದು ಹರಿಹಾಯ್ದಿದೆ.

'ನೆರೆ ಸಂತ್ರಸ್ತರ ಕರೆ ಬಂದರೆ ತಲೆನೋವು ಎಂದು ಹೇಳಿರುವ ಬಿಜೆಪಿ ಶಾಸಕ ಮಹೇಶ್ ಕುಮಠಳ್ಳಿ ಮಾತು ಇಡೀ ಬಿಜೆಪಿ ಧೋರಣೆಯನ್ನು ಬಿಂಬಿಸುತ್ತದೆ' ಎಂದೂ ಕಾಂಗ್ರೆಸ್‌ ಟೀಕಿಸಿದೆ.

 

 

 

‘ನಾನು ನಿಮ್ಮ ಮುಂದೆ ಕುಳಿತಿದ್ದೇನೆ. ತಲೆ ಬ್ಯಾರೆ ಬ್ಯಾರೆ ಕಡೆಯೇ ಇದೆ. ಕರೆ ಬಂದರೆ ಸಾಕು ಮೊಬೈಲ್‌ ಫೋನ್‌ ಒಗಿಲೇನ ಅನ್ನಿಸ್ತೈತಿ. ಮೈಯೆಲ್ಲಾ ಬಿಗಿದಂಗಾಗೈತಿ. ಒಂದ್ ಕಡೆ ಹೊತಕೊಂಡ ಮಕ್ಕೊಬೇಕು ಅನ್ನಿಸ್ತೈತಿ’ ಎಂದು ಅಥಣಿಯ ಬಿಜೆಪಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ವೈರಲ್ ಆಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು