ಗುರುವಾರ , ಫೆಬ್ರವರಿ 9, 2023
30 °C
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಜಯಿಸಿದ ಕರ್ನಾಟಕ ಮೂಲದ ಮಹಿಳೆ

ಮಲ್ಲೇಶ್ವರದಲ್ಲಿ ಶಾಪಿಂಗ್ ನಡೆಸುವ ಮೇಘನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೆರಿಕದಲ್ಲಿ ಜನಪ್ರತಿನಿಧಿಗಳ ಸಭೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಜಯಗಳಿಸಿದ ಕರ್ನಾಟಕ ಮೂಲದ ಮೇಘನ್ ಶ್ರೀನಿವಾಸ್ ಅವರು ಇಲ್ಲಿಗೆ ಬಂದಾಗಲೆಲ್ಲ ಮಲ್ಲೇಶ್ವರದಲ್ಲಿ ಶಾಪಿಂಗ್ ನಡೆಸುತ್ತಿದ್ದರು.

ಅವರು ಲೋವಾ ಹೌಸ್ ಡಿಸ್ಟ್ರಿಕ್ 30ರಿಂದ ಸ್ಪರ್ಧಿಸಿದ್ದರು. ಶೇ 63ರಷ್ಟು ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ ಜಯ ಸಾಧಿಸಿದ್ದಾರೆ. ತುಮಕೂರಿನ ಕುಣಿಗಲ್ ತಾಲ್ಲೂಕಿನ ಶ್ರೀನಿವಾಸ್ ಹಾಗೂ ಗೀತಾ ದಂಪತಿಯ ಪುತ್ರಿಯಾಗಿರುವ ಅವರು, ಅಮೆರಿಕದಲ್ಲಿಯೇ ಹುಟ್ಟಿ, ಬೆಳೆದಿದ್ದಾರೆ. ಪಶುವೈದ್ಯಕೀಯ ವಿಜ್ಞಾನಿಯಾಗಿರುವ ಅವರ ತಂದೆ, 1982ರಲ್ಲಿಯೇ ಅಮೆರಿಕಕ್ಕೆ ತೆರಳಿ, ಅಲ್ಲಿಯೆ ವಾಸವಿದ್ದಾರೆ. 

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಮೇಘನ್, ಕನ್ನಡ ಸೇರಿ ಏಳು ಭಾಷೆಗಳನ್ನು ಮಾತನಾಡುತ್ತಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. 

‘ಮೇಘನ್ ಅವರು ಮೊದಲಿನಿಂದಲೂ ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಬಡ ಮಕ್ಕಳ ಬಗ್ಗೆ ಕಾಳಜಿ ಹೊಂದಿದ್ದರು. ಒಟ್ಟು ಜನರಲ್ಲಿ ಶೇ 2ರಷ್ಟು ಏಷ್ಯಾದವರು ಇರುವ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಗೆಲ್ಲುವ ನಿರೀಕ್ಷೆ ಇದ್ದರೂ ಸ್ವಲ್ಪ ಕಸಿವಿಸಿಯಿತ್ತು. ಅಂತಿಮವಾಗಿ ಗೆಲುವು ಸಾಧಿಸಿರುವುದು ಕುಟುಂಬದಲ್ಲಿ ಸಂತಸವನ್ನುಂಟು ಮಾಡಿದೆ’ ಎಂದು ಮೇಘನ್ ಅವರ ತಂದೆಯ ಸಹೋದರ ಡಾ. ನಾಗರಾಜ್ ಜವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮೇಘನ್‌ ಅವರು ಹಲವು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಅವರಿಗೆ ಬೆಂಗಳೂರಿನಲ್ಲಿಯೂ ಸಂಬಂಧಿ ಇದ್ದಾರೆ. ಬೆಂಗಳೂರಿಗೆ ಭೇಟಿ ನೀಡಿದಾಗಲೆಲ್ಲ ಮಲ್ಲೇಶ್ವರದಲ್ಲಿ ಶಾಪಿಂಗ್ ನಡೆಸುತ್ತಿದ್ದರು. ಅವರು ಶಾಪಿಂಗ್ ಪ್ರಿಯರಾಗಿದ್ದಾರೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು