ಬೆಂಗಳೂರು: ಶೃಂಗೇರಿ ತಾಲ್ಲೂಕು ಉಪ ನೋಂದಣಾಧಿಕಾರಿ ಎಚ್.ಎಸ್. ಚೆಲುವರಾಜು ಅವರಿಂದ ಹಣ ಕೇಳಿದ ಆರೋಪ ಎದುರಿಸುತ್ತಿರುವ ಕಂದಾಯ ಸಚಿವ ಆರ್. ಅಶೋಕ ಅವರ ಆಪ್ತ ಸಹಾಯಕ ಗಂಗಾಧರ್ ಅವರನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ:ಹಣಕ್ಕೆ ಬೇಡಿಕೆ ಇಟ್ಟ ಕಂದಾಯ ಸಚಿವರ ಪಿಎ: ಆರೋಪ

ಹಣ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಠಾಣೆಯಲ್ಲಿ ಚೆಲುವರಾಜು ದೂರು ನೀಡಿದ್ದರು. ಗಂಗಾಧರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ವಿಧಾನಸೌಧದ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್, ಅಶೋಕ ಅವರ ಆಪ್ತ ಸಹಾಯಕ ಆಗಿ ನೇಮಕಗೊಂಡಿದ್ದರು. ಹಣ ಕೇಳಿದ ಆರೋಪ ಕಾರಣ ಗಂಗಾಧರ್ ಅವರನ್ನು ಮಾತೃ ಇಲಾಖೆಗೆ ಅಶೋಕ ವಾಪಸು ಕಳುಹಿಸಿದ್ದಾರೆ.

ಜ. 24ರಂದು ಚಿಕ್ಕಮಗಳೂರು ಪ್ರವಾಸವನ್ನು ಅಶೋಕ ಕೈಗೊಂಡಿದ್ದರು. ಅಂದು ಬೆಳಿಗ್ಗೆ ಅಶೋಕ ಅವರ ಆಪ್ತ ಸಹಾಯಕ ಎಂದು ಕರೆ ಮಾಡಿದ್ದ ಗಂಗಾಧರ್, ಹಣ ಕೀಳಲು ಯತ್ನಿಸಿದ್ದರು’ ಎಂದು ದೂರಿಲ್ಲಿ ಚೆಲುವರಾಜು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.