ಬೆಂಗಳೂರು: 'ನಾಡಿದ ರೈತರು ಯಾವುದೇ ಆತಂಕಕ್ಕೆಒಳಗಾಗುವ ಅಗತ್ಯ ಇಲ್ಲ. ರೈತರ ಬಿಲ್ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ' ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಹೇಳಿದರು.
ರೈತರು ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತ ಪಾವತಿ ವಿಚಾರ ಕುರಿತು ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಬೆಳಿಗ್ಗೆ ಮಾತನಾಡಿದ ಅವರು, 'ರೈತರ ಹಣ ಬಾಕಿ ಪಾವತಿ ಬಗ್ಗೆ ಬೆಳಗಾವಿಯಲ್ಲಿ ಹಾಗೂ ಬೆಂಗಳೂರಿನಲ್ಲಿಸಭೆ ನಡೆಸಿದ್ದೇನೆ' ಎಂದರು.
'ಮಾಲೀಕರು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೆ. ರೈತರಿಗೆ ಬಾಕಿ ಇರುವ ಹಣ ನೀಡಲು ಸೂಚನೆ ನೀಡಲಾಗಿತ್ತು. ಈ ವರ್ಷ 42.17 ಕೋಟಿ ಮೊತ್ತ ಬಾಕಿ ಇತ್ತು . ಕಾರ್ಖಾನೆಗಳು ಮೂರು ದಿನಗಳ ಒಳಗಾಗಿ 26.26 ಕೋಟಿ ಜಮೆ ಮಾಡಲಾಗಿದೆ ಇನ್ನು ಪಾವತಿ ಆಗದ 15.91 ಕೋಟಿ ಬಾಕಿ ಇದೆ' ಎಂದರು.
'ಬಸವೇಶ್ವರ ಶುಗರ್ಸ್ 9.50 ಕೋಟಿ, ಕೋರ್ ಗ್ರೀನ್ ಶುಗರ್ಸ್ ಕಾರ್ಖಾನೆಯಿಂದ 6.41 ಬಾಕಿ ಇದೆ. ಈ ಕಾರ್ಖಾನೆಗಳಿಗೆ ವಸೂಲಾತಿಗೆ ನೋಟಿಸ್ ನೀಡಲಾಗಿದೆ ' ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.