ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಹರಿಶ್ಚಂದ್ರ ಪಿಡಿಒಗಳು ಬೇಕಲ್ಲವೇ: ಸಚಿವ ವಿ.ಸೋಮಣ್ಣ ಪ್ರಶ್ನೆ

Last Updated 14 ಸೆಪ್ಟೆಂಬರ್ 2020, 10:34 IST
ಅಕ್ಷರ ಗಾತ್ರ

ಮಡಿಕೇರಿ: ‘ಸತ್ಯ ಹರಿಶ್ಚಂದ್ರ ಪಿಡಿಒಗಳಿದ್ದರೆ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು) ಅವರಿಗೆ ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ, ಸತ್ಯ ಹರಿಶ್ಚಂದ್ರ ಪಿಡಿಒಗಳು ಬೇಕಲ್ಲವೇ’ ಎಂದು ವಸತಿ ಸಚಿವ ವಿ.ಸೋಮಣ್ಣ ಸೋಮವಾರ ಪ್ರಶ್ನಿಸಿದರು.

‘ಶಾಸಕರಾದ ಎಚ್‌.ಡಿ.ರೇವಣ್ಣ, ಶಿವಲಿಂಗೇಗೌಡ ಹಾಗೂ ಎ.ಟಿ.ರಾಮಸ್ವಾಮಿ ಅವರೊಂದಿಗೆ ಹಾಸನದಲ್ಲಿ ಚರ್ಚಿಸುವಾಗ ರೇವಣ್ಣ ಅವರು ಇವರನ್ನೆಲ್ಲಾ ಜೈಲಿಗೆ ಹಾಕಬೇಕೆಂದು ಎಚ್‌.ಡಿ.ರೇವಣ್ಣ ಸ್ಪಷ್ಟವಾಗಿ ಹೇಳಿದ್ದರು. ಆಗ ನಾನು ಕೆಲವು ರಾಕ್ಷಿಸಿ ಪ್ರವೃತ್ತಿ ಪಿಡಿಒಗಳಿದ್ದಾರೆ. ಅವರು ಹೇಳಿದ್ದನ್ನೆಲ್ಲಾ ಕೇಳಬೇಡಿ ಎಂದು ತಾಲ್ಲೂಕು ಪಂಚಾಯಿತಿ ಇಒಗಳಿಗೆ ಸೂಚಿಸಿದ್ದೆ. ಕೆಲವು ರಾಕ್ಷಿಸಿ ಪ್ರವೃತ್ತಿ ಪಿಡಿಒಗಳು ಬಡವರನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಇವರಿಂದ ಅರ್ಹರಿಗೆ ಮನೆ ಸಿಗುವುದು ಕಷ್ಟವಾಗಿದೆ. ಅಂಥ ಪಿಡಿಒಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿದ್ದೆ’ ಎಂದು ಸೋಮಣ್ಣ ಸ್ಪಷ್ಟನೆ ನೀಡಿದರು.

‘ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಣಜನಹಳ್ಳಿ ಗ್ರಾಮದಲ್ಲಿ 390 ಮನೆಗಳನ್ನು ನಾನು ವೀಕ್ಷಿಸಿದ್ದು ಅಲ್ಲಿ 190 ಮನೆಗಳೂ ಬೋಗಸ್ ಆಗಿದ್ದವು. ನಾಲ್ವರು ಪಿಡಿಒಗಳ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಯಿತು. ಬೀದರ್‌ ಜಿಲ್ಲೆಯಲ್ಲೂ ಮನೆಗಳು ಅರ್ಹರಿಗೆ ವಿತರಣೆ ಮಾಡಿರಲಿಲ್ಲ. ಆದ್ದರಿಂದ, ಹಾಸನದಲ್ಲಿ ಸೂರಿಲ್ಲದ ಬಡವರಿಗೆ ಮನೆ ವಿತರಣೆ ಮಾಡಬೇಕೆಂದು ಇಒಗಳಿಗೆ ಸೂಚಿಸಿದ್ದೆ. 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಬಡವರ ಹೆಸರಿನಲ್ಲಿ ಅನ್ಯಾಯ ಎಸಗುವ ಪಿಡಿಒಗಳಿಗೆ ಇಲ್ಲಿ ಜಾಗವಿಲ್ಲ’ ಎಂದು ಸೋಮಣ್ಣ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT