ಗುರುವಾರ , ಸೆಪ್ಟೆಂಬರ್ 24, 2020
24 °C

ರಸಪ್ರಶ್ನೆ ಸ್ಪರ್ಧೆಯಲ್ಲಿ ಮಿತ್ರ ಹೆಗಡೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಕ್ಸಸ್ ಫಿಲ್ಮ್ಸ್ ಇಂಡಿಯಾ ಹಾಗೂ ಡಿ.ಕೆ.ಫ್ಲಾಗ್ ಫೌಂಡೇಷನ್ ವತಿಯಿಂದ ಶನಿವಾರ ನಡೆದ 'ಇಂಡಿಯಾ ಕ್ವಿಝ್' ರಸಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ವಿ.ವಿ.ಪುರದ ಜೈನ್ ಕಾಲೇಜಿನ ವಿದ್ಯಾರ್ಥಿ ಮಿತ್ರ ಹೆಗಡೆ ವಿಜೇತರಾಗಿದ್ದಾರೆ.

ಜುಲೈ 4ರಿಂದ ಸ್ಪರ್ಧೆ ಆರಂಭಗೊಂಡಿತ್ತು. ಅಂತಿಮ 13 ಸ್ಪರ್ಧಿಗಳ ಪೈಕಿ ಮಿತ್ರ ಹೆಗಡೆ ವಿಜೇತರಾಗಿ ಹೊರಹೊಮ್ಮಿದ್ದಾರೆ. ಪ್ರಶಸ್ತಿ ₹50 ಸಾವಿರ ನಗದು, ಗಿಫ್ಟ್ ವೋಚರ್ ಹಾಗೂ ಫಲಕ ಒಳಗೊಂಡಿದೆ.

ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನ ನೆಫ್ರಾಲಜಿ ವಿಭಾಗದ ಮುಖ್ಯಸ್ಥ ಡಾ.ಸುಶಾಂತ್ ಹಾಗೂ ಗುಜರಾತಿ ಚಿತ್ರ ನಟಿ ಹಿಮಾಂಗಿನಿ ಹಂಚಿಕೊಂಡಿದ್ದಾರೆ. ಈ ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ.

₹15 ಸಾವಿರ ನಗದು ಹಾಗೂ ಫಲಕ ಒಳಗೊಂಡಿರುವ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ತಿರುವನಂತಪುರದ ವೈದ್ಯೆ ದೀಪ್ತಿ ಸ್ಯಾಮ್ಯುಯೆಲ್, ಬಹುರಾಷ್ಟ್ರೀಯ ಕಂಪನಿಕೆಮ್ ಟ್ರೀಟ್ ಇಂಡಿಯಾ ಲಿಮಿಟೆಡ್‍ನ ಮುಖ್ಯಸ್ಥ ಮುಕುಲ್ ಗುಪ್ತಾ, ಕೆಪಿಎಂಜಿ ಹಿರಿಯ ಪಾಲುದಾರ ನವೀನ್ ಅಗರವಾಲ್ ಹಂಚಿಕೊಂಡಿದ್ದಾರೆ.

ಆನ್‍ಲೈನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈನ  ಹೀರಾನಂದಾನಿ ಕಂಪನಿ ಮುಖ್ಯಸ್ಥ ನಿರಂಜನ್ ಹೀರಾನಂದಾನಿ, ಡಾ.ಸಂದೇಶ್ ಮಾಯೇಕರ್, ನ್ಯಾ.ಸುಧೀರ್ ಅಗರ್‌ವಾಲ್‌, ಹಾಕಿ ಆಟಗಾರ ಮೆಲ್ವಿನ್ ಫರ್ನಾಂಡೀಸ್, ಲಂಡನ್‍ನ ರಾಯಲ್ ಆಸ್ಪತ್ರೆಯ ಡಾ.ಶೈಲೇಶ್, ಬಾಲಿವುಡ್‌ನ ಗೀತ ರಚನೆಕಾರ ರವೀಂದ್ರ ರಾವಲ್ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು