ಶನಿವಾರ, ಆಗಸ್ಟ್ 20, 2022
21 °C

ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಎಂಆರ್‌ಪಿಎಲ್ ಡೀಸೆಲ್‌ ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ಎಂಆರ್‌ಪಿಎಲ್‌ನಲ್ಲಿ ಉತ್ಪಾದಿಸುವ ಡೀಸೆಲ್‌ ಪೂರೈಕೆಯಾಗಲಿದೆ.

ಎರಡು ನಿಗಮಗಳ ಬಸ್‌ಗಳಿಗೆ ಡೀಸೆಲ್ ಪೂರೈಸುವ ಟೆಂಡರ್‌ಅನ್ನು ಎಚ್‌ಪಿಸಿಎಲ್ ನಿರ್ವಹಿಸುತ್ತಿದ್ದು, ಸಂಪೂರ್ಣ ಪೂರೈಕೆಗಾಗಿ ಎಚ್‌ಪಿಸಿಎಲ್, ಎಂಆರ್‌ಪಿಎಲ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ಆಗಸ್ಟ್‌ 29ರಿಂದ ಚಾಲ್ತಿಗೆ ಬಂದಿದೆ. ಈ ಟೆಂಡರ್ ಅಡಿಯಲ್ಲಿ ಎಂಆರ್‌ಪಿಎಲ್‌ನಿಂದ ಎಚ್‌ಪಿಸಿಎಲ್‌ದೊಂದಿಗೆ ಕೆಎಸ್‌ಆರ್‌ಟಿಸಿಗೆ ಮೊದಲ ಲೋಡ್‌ಅನ್ನು ಈಗಾಗಲೇ ರವಾನಿಸಲಾಗಿದೆ.

‘ಈ ಒಡಂಬಡಿಕೆಯು ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಇದರಿಂದ ಕಳೆದ ವರ್ಷಕ್ಕಿಂತ 20 ಪಟ್ಟು ಹೆಚ್ಚಿನ ಡೀಸೆಲ್‌ ಅನ್ನು ಈ ವರ್ಷದಲ್ಲಿ ಮಾರಾಟ ಮಾಡಲು ಸಾಧ್ಯವಾಗಲಿದೆ. ಎಂಆರ್‌ಪಿಎಲ್ ತನ್ನ ಚಿಲ್ಲರೆ ಮಾರಾಟ ಜಾಲವನ್ನು ಕರ್ನಾಟಕ ಮತ್ತು ಕೇರಳದಲ್ಲಿ ವಿಸ್ತರಿಸುತ್ತಿದ್ದು, ಅನೇಕ ಚಿಲ್ಲರೆ ಮಾರಾಟ ಮಳಿಗೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ’ ಎಂದು ಮಾರುಕಟ್ಟೆ ವಿಭಾಗ ಜಿಜಿಎಂ ಸತ್ಯನಾರಾಯಣ ಎಚ್‌.ಸಿ. ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು