ಗುರುವಾರ , ಡಿಸೆಂಬರ್ 1, 2022
27 °C

ಜೈಲಿನಲ್ಲಿಯೇ 174 ಚೆಕ್‌ಗೆ ಸಹಿ ಹಾಕಿದ ಮುರುಘಾಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬ್ಯಾಂಕ್‌ ಖಾತೆಯ 174 ಚೆಕ್‌ಗಳಿಗೆ ಜೈಲಿನಲ್ಲಿಯೇ ಸೋಮವಾರ ಸಹಿ ಹಾಕಿದರು.

ಚೆಕ್‌ಗೆ ಸಹಿ ಹಾಕಲು ಹೈಕೋರ್ಟ್‌ ಸೆ.30ರಂದು ಷರತ್ತುಬದ್ಧ ಅನುಮತಿ ನೀಡಿತ್ತು. ಅ.3, 6 ಹಾಗೂ 10ರಂದು ದಿನ ನಿಗದಿ ಮಾಡಿತ್ತು.

ಮಠದ ಸಿಬ್ಬಂದಿ, ಪೊಲೀಸರು ಹಾಗೂ ವಕೀಲರು ಜಿಲ್ಲಾ ಕಾರಾಗೃಹಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಚೆಕ್‌ಗಳನ್ನು ಕಾರಾಗೃಹದ ಅಧಿಕಾರಿಗಳಿಗೆ ಸಲ್ಲಿಸಿದರು.

ಚೆಕ್‌ಗಳಲ್ಲಿ ನಮೂದಾಗಿದ್ದ ದಿನಾಂಕದ ಬಗ್ಗೆ ಗೊಂದಲ ಮೂಡಿದ್ದರಿಂದ ಕಾರಾಗೃಹದ ಅಧೀಕ್ಷರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಸಲಹೆ ಕೋರಿದರು. ನ್ಯಾಯಾಲಯದ ಸೂಚನೆಯ ಮೇರೆಗೆ 174 ಚೆಕ್‌ಗಳಿಗೆ ಸಹಿ ಹಾಕಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು