ಬುಧವಾರ, ಅಕ್ಟೋಬರ್ 20, 2021
29 °C

ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಟ್ವಿಟರ್‌ ಖಾತೆ ಹ್ಯಾಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೈಗಾರಿಕಾ ಸಚಿವ ಮುರುಗೇಶ ಆರ್‌. ನಿರಾಣಿ ಅವರ ಟ್ವಿಟರ್‌ ಖಾತೆಯನ್ನು ಹ್ಯಾಕ್‌ ಮಾಡಿರುವ ಕಿಡಿಗೇಡಿಗಳು, ನಿರಾಣಿ ಖಾತೆಯಲ್ಲಿ ಬುರ್ಖಾಧಾರಿ ವಿದೇಶಿ ಮಹಿಳೆಯ ಚಿತ್ರವನ್ನು ಪ್ರಕಟಿಸಿದ್ದಾರೆ. ಅರೇಬಿಕ್‌ ಭಾಷೆಯಲ್ಲಿ ಸಂದೇಶಗಳನ್ನೂ ಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ನಿರಾಣಿ, ‘ಅಜ್ಞಾತ ವಿದೇಶಿ ಸ್ಥಳದಿಂದ ನನ್ನ ಟ್ವಿಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿದೆ. ಆರೋಪಿಗಳ ನಿಖರ ಮಾಹಿತಿ ಮತ್ತು ಮೂಲ ತಿಳಿದಿಲ್ಲ. ಈ ಕುರಿತು ಟ್ವಿಟರ್‌ ಕಂಪನಿಗೆ ದೂರು ನೀಡಿದ್ದೇನೆ. ಸೈಬರ್‌ ಅಪರಾಧ ಪೊಲೀಸರಿಗೂ ದೂರು ನೀಡುತ್ತೇನೆ’ ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ನಿರಾಣಿ ಅವರ ಫೇಸ್‌ಬುಕ್‌ ಖಾತೆಯನ್ನೂ ಹ್ಯಾಕ್‌ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು