ಮೈಸೂರು ದಸರಾ: ಅಂಬಾರಿ ಹೊರಲು ಸಿದ್ಧವಾದ ಅಭಿಮನ್ಯು

ಗೋಣಿಕೊಪ್ಪಲು (ಕೊಡಗು): ಮತ್ತಿಗೋಡು ಸಾಕಾನೆ ಶಿಬಿರದ ಬಲಾಢ್ಯ ಆನೆಯಾದ ಅಭಿಮನ್ಯು ಈ ಬಾರಿ ಮೈಸೂರು ದಸರಾ ಅಂಬಾರಿ ಹೊರಲು ಸಿದ್ಧವಾಗಿದೆ. ಅಭಿಮನ್ಯು, 750 ಕೆ.ಜಿಯ ಚಿನ್ನದ ಅಂಬಾರಿ ಹೊರಲಿದ್ದಾನೆ.
ಹಿಂದೆ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಂಬಾರಿ ಹೊರಲು 54ರ ಹರೆಯದ ಅಭಿಮನ್ಯುವನ್ನು ಆಯ್ಕೆ ಮಾಡಲಾಗಿದೆ’ ಎಂದು ದಸರಾ ಅಂಬಾರಿ ಆನೆ ಜವಾಬ್ದಾರಿ ಹೊತ್ತಿರುವ ಮೈಸೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲೆಗ್ಸಾಂಡರ್ ತಿಳಿಸಿದ್ದಾರೆ.
ಇದನ್ನೂ ಓದಿ: PV Web Exclusive | ವೆಲ್ಡನ್ ಅರ್ಜುನ, ಗುಡ್ಬೈ!
ಅಭಿಮನ್ಯು ಜತೆಗೆ ದಸರಾದಲ್ಲಿ ಪಾಲ್ಗೊಳ್ಳಲು ಕುಶಾಲನಗರ ದುಬಾರೆ ಸಾಕಾನೆ ಶಿಬಿರದ ವಿಕ್ರಂ (58), ಹರ್ಷ (54), ವಿಜಯ (53), ಕಾವೇರಿ (50), ಗೋಪಿ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಈ ಆನೆಗಳು ಅಕ್ಟೋಬರ್ 2ರಂದು ಸಂಪ್ರದಾಯದಂತೆ ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಗೆ ಪ್ರಯಾಣ ಬೆಳೆಸಿ ಬಳಿಕ ಮೈಸೂರಿಗೆ ತೆರಳಲಿವೆ.
ಮತ್ತಿಗೋಡು ಶಿಬಿರದಿಂದ ಅಂಬಾರಿ ಹೊರುವ ಎರಡನೇ ಆನೆ ಅಭಿಮನ್ಯು ಆಗಿದೆ. ಹಿಂದೆ ಇದೇ ಶಿಬಿರದಲ್ಲಿದ್ದ ಬಲರಾಮ ಆನೆ ಕೂಡ ಅಂಬಾರಿ ಹೊರುತ್ತಿತ್ತು. ಅದರ ನಿವೃತ್ತಿಯ ಬಳಿಕ ಈ ಜವಾಬ್ದಾರಿ ಅರ್ಜುನನ ಹೆಗಲೇರಿತ್ತು. ಅಭಿಮನ್ಯುವನ್ನು ಮಾವುತ ವಸಂತ, ಕಾವಾಡಿ ಜೆ.ಕೆ.ರಾಜು ಮುನ್ನಡೆಸಲಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.