ಶನಿವಾರ, ಏಪ್ರಿಲ್ 17, 2021
23 °C

ಖಾಸಗಿ ಏಜೆನ್ಸಿಗಳ ಮೊರೆ ಹೋಗಬೇಡಿ: ನ್ಯಾಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾನ್ಯತೆ ಅಥವಾ ಗ್ರೇಡ್ ನೀಡಿಕೆಗೆ ಸಂಬಂಧಿಸಿದಂತೆ ಯಾವುದೇ ಖಾಸಗಿ ಏಜೆನ್ಸಿಗಳನ್ನು ಸಂಪರ್ಕಿಸುವುದು ಅಥವಾ ಅವುಗಳ ಆಮಿಷಕ್ಕೆ ಒಳಗಾಗಬೇಡಿ ಎಂದು ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್‌) ಸಲಹೆ ಮಾಡಿದೆ.

ನ್ಯಾಕ್ ನೀಡುವ ಗ್ರೇಡ್‌ ಆಧಾರದ ಮೇಲೆ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಅಳೆಯಲಾಗುತ್ತದೆ.

‘ಗ್ರೇಡ್‌ ಕೋರಿ ಅರ್ಜಿ ಸಲ್ಲಿಸುವುದು ಅಥವಾ ಗ್ರೇಡ್‌ ನೀಡಿಕೆ ಪ್ರಕ್ರಿಯೆಗೆ ಯಾವುದೇ ಖಾಸಗಿ ಸಂಘಟನೆ ಅಥವಾ ಏಜೆನ್ಸಿಗೆ ನಾವು ಅನುಮತಿ ನೀಡಿಲ್ಲ. ಈ ಕುರಿತು ಯಾವುದೇ ಸಂಸ್ಥೆ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದರೆ ಅಥವಾ ಭರವಸೆ ನೀಡಿದರೆ ಅದನ್ನು ಪರಿಗಣಿಸಬಾರದು’ ಎಂದು ನ್ಯಾಕ್‌ ಪ್ರಕಟಣೆಯಲ್ಲಿ ಹೇಳಿದೆ.

ಕೆಲವು ಖಾಸಗಿ ಏಜೆನ್ಸಿಗಳು ನ್ಯಾಕ್‌ಗೆ ಅರ್ಜಿ ಸಲ್ಲಿಸುವುದು ಸೇರಿದಂತೆ ಈ ಪ‍್ರಕ್ರಿಯೆ ನಡೆಸಲು ಎಲ್ಲ ಸಹಕಾರ ನೀಡುವುದಾಗಿ ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದನ್ನು ಗಮನಿಸಿದ ನಂತರ ಪರಿಷತ್ತು ಈ ಸೂಚನೆ ನೀಡಿದೆ.

‘ನ್ಯಾಕ್‌ನ ಇಡೀ ಪ್ರಕ್ರಿಯೆಯು ಸಂಪೂರ್ಣ ತಂತ್ರಜ್ಞಾನ ಆಧಾರಿತವಾಗಿದ್ದು, ಪಾರದರ್ಶಕವಾಗಿದೆ. ಈ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರು ನ್ಯಾಕ್‌ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬೇಕು’ ಎಂದು ನ್ಯಾಕ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು