ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌–2 ಫೋಟೊ ಹಂಚಿಕೊಂಡ ಪ್ರಧಾನಿ ಮೋದಿ

Last Updated 9 ನವೆಂಬರ್ 2022, 14:31 IST
ಅಕ್ಷರ ಗಾತ್ರ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುಸಜ್ಜಿತ, ಭವ್ಯವಾದ ಟರ್ಮಿನಲ್‌–2 ಲೋಕಾರ್ಪಣೆಗೆ ಸಿದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇದರ ಸುಂದರ ಚಿತ್ರಗಳನ್ನು ಟ್ವೀಟ್‌ ಮಾಡಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–2 ರ ಸುಂದರ ಚಿತ್ರಗಳು ಇಲ್ಲಿವೆ. ಇದು ನಿಲ್ದಾಣದ ಸಾಮರ್ಥ್ಯ ಹೆಚ್ಚಿಸಲಿದೆ ಮತ್ತು ವ್ಯಾಪಾರ ಉತ್ತೇಜಿಸಲಿದೆ. ಸುದೀರ್ಘ ಬಾಳಿಕೆ ಮಾನದಂಡಗಳೊಂದಿಗೆ ಟರ್ಮಿನಲ್‌ ನಿರ್ಮಾಣಗೊಂಡಿದೆ ಎಂದು ಮೋದಿ ಹೇಳಿದ್ದಾರೆ.

ನ.11 ರಂದು ನಗರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ನೂತನ ಟರ್ಮಿನಲ್‌ ಲೋಕಾರ್ಪಣೆಗೊಳಿಸಲಿದ್ದಾರೆ. ₹5000 ಕೋಟಿ ವೆಚ್ಚದಲ್ಲಿ ಟರ್ಮಿನಲ್‌ ನಿರ್ಮಿಸಲಾಗಿದ್ದು, ಈಗಿನ ವಾರ್ಷಿಕ 2.5 ಕೋಟಿ ಪ್ರಯಾಣಿಕ ಸಾಮರ್ಥ್ಯದಿಂದ 5–6 ಕೋಟಿಗೆ ಹೆಚ್ಚಲಿದೆ. ಬೆಂಗಳೂರಿನ ‘ಉದ್ಯಾನನಗರಿ’ ಎಂಬ ಹೆಸರಿಗೆ ತಕ್ಕಂತೆ ಪ್ರಯಾಣಿಕರು ಉದ್ಯಾನವನದಲ್ಲಿ ನಡೆದ ಅನುಭವ ನೀಡುವ ರೀತಿಯಲ್ಲಿ ಈ ಟರ್ಮಿನಲ್‌ ವಿನ್ಯಾಸಗೊಳಿಸಲಾಗಿದೆ.

10,000 ಚದರ ಅಡಿ ವ್ಯಾಪ್ತಿಯ ಹಸಿರಾದ ಪರಿಸರದಲ್ಲಿ ಪ್ರಯಾಣಿಕರು ನಡೆದಾಡಬಹುದಾಗಿದೆ. ಶೇ.100ರಷ್ಟು ನವೀಕರಿಸಬಹುದಾದ ಶಕ್ತಿಯ ಮಾನದಂಡಗಳ ಅನ್ವಯ ಈ ಟರ್ಮಿನಲ್‌ ವಿನ್ಯಾಸಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT