ಗುರುವಾರ , ಅಕ್ಟೋಬರ್ 28, 2021
18 °C

ತಮಿಳುನಾಡು ಪ್ರಯಾಣ ನೆಗೆಟಿವ್ ವರದಿ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯ ಚೆಕ್‌ ಪೋಸ್ಟ್ ಮೂಲಕ ತಮಿಳುನಾಡಿಗೆ ಹೋಗುವುದಕ್ಕೆ ಹಾಗೂ ಅಲ್ಲಿಂದ ಜಿಲ್ಲೆಯನ್ನು ಪ್ರವೇಶಿಸುವುದಕ್ಕೆ ಈಗ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಅಲ್ಲ. ಕೋವಿಡ್ ಲಸಿಕೆ ಎರಡು ಡೋಸ್ ಪಡೆದರೆ ಸಾಕು.

 ಇತ್ತೀಚಿನವರೆಗೂ ಅಂತರರಾಜ್ಯ ಪ್ರಯಾಣಕ್ಕೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ‌ ಕಡ್ಡಾಯವಾಗಿತ್ತು.

ಜಿಲ್ಲಾಡಳಿತವು ವಾರದ ಹಿಂದೆಯೇ, ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಿದ್ದ ಆದೇಶ ವಾಪಸ್ ಪಡೆದಿತ್ತು.

ಆದರೆ, ತಮಿಳುನಾಡು ಪ್ರವೇಶಕ್ಕೆ ಇ-ಪಾಸ್ ಜೊತೆಗೆ ಪರೀಕ್ಷಾ ನೆಗೆಟಿವ್ ವರದಿ‌ ಕಡ್ಡಾಯವಾಗಿತ್ತು. ಎರಡು ದಿನಗಳಿಂದ ಅಲ್ಲಿನ ಸಿಬ್ಬಂದಿ ಕೂಡ ವರದಿಯನ್ನು ಕೇಳುತ್ತಿಲ್ಲ. ಆದರೆ, ಇ-ಪಾಸ್ ಹಾಗೂ ಕೋವಿಡ್ ಲಸಿಕೆ ಎರಡು ಡೋಸ್ ಪಡೆದಿರುವ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು