ಗುರುವಾರ , ಮಾರ್ಚ್ 23, 2023
28 °C

ಫೆ. 4ರಂದು ಅನುದಾನ ರಹಿತ ಶಾಲೆಗಳ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮ) ಫೆಬ್ರುವರಿ 4ರಂದು ಬೆಂಗಳೂರಿನಲ್ಲಿ ವಿಶೇಷ ಸಮ್ಮೇಳನ ಆಯೋಜಿಸಿದೆ.

ಕುಸ್ಮದ 40ನೇ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಜಯನಗರದ ಆರ್‌.ವಿ. ಟೀಚರ್ಸ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಈ ಸಮ್ಮೇಳನ ಅಂದು ಬೆಳಿಗ್ಗೆ 9:30ಕ್ಕೆ ಆರಂಭವಾಗಲಿದೆ. 

ಅನುದಾನ ರಹಿತ ಶಾಲೆಗಳ ಸಮಸ್ಯೆ, ನ್ಯಾಯಾಲಯದ ತೀರ್ಪು, ಇಎಸ್ಐ, ಗ್ರಾಚ್ಯುಟಿ, ಮಾನ್ಯತೆ ನವೀಕರಣ, ಆಸ್ತಿ ತೆರಿಗೆ, ಸರ್ಕಾರದ ನೂತನ ಆದೇಶಗಳ ಬಗ್ಗೆ ವಿವಿಧ ತಜ್ಞರಿಂದ ಮಾರ್ಗದರ್ಶನ, ಉಪನ್ಯಾಸಗಳು ನಡೆಯಲಿವೆ. ಶಿಕ್ಷಣ ತಜ್ಞರು, ಕಾನೂನು ತಜ್ಞರು ಭಾಗವಹಿಸುವರು.  

ಶಿಕ್ಷಣ ತಜ್ಞ ಜಿ.ಎಸ್. ಶರ್ಮಾ ಅವರ ನೇತೃತ್ವ ದಲ್ಲಿ 1984ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಹಿತರಕ್ಷಣೆಗಾಗಿ ಹೋರಾ ಡಿದ ಇತಿಹಾಸ ಹೊಂದಿದೆ. ಸರ್ಕಾರದ ಭಾಷಾ ನೀತಿಯ ಕುರಿತು ಸಂಘಟನೆ ನ್ಯಾಯಾಂಗ ಹೋರಾಟ ನಡೆಸಿ, ಜಯಗಳಿಸಿದೆ ಎಂದು ಸಂಘಟನೆಯ ಅಧ್ಯಕ್ಷ ಎಸ್. ಸತ್ಯಮೂರ್ತಿ, ಕಾರ್ಯದರ್ಶಿ ಎ.ಮರಿಯಪ್ಪ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.