ಶನಿವಾರ, ಜನವರಿ 28, 2023
15 °C

‘ವಿಸ್ಮಯ ಕೀಟ ಪ್ರಪಂಚ’ಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮುಸ್ಲಿಂ ಬರಹಗಾರರ ಕನ್ನಡದ ಅತ್ಯುತ್ತಮ ಕೃತಿಗೆ, ಕರ್ನಾಟಕ ಮುಸ್ಲಿಂ ಲೇಖಕರ ಸಂಘ ನೀಡಲಿರುವ ರಾಜ್ಯ ಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಗೆ 2021ನೇ ಸಾಲಿಗೆ ಡಾ.ನೂರ್ ಸಮದ್ ಅಬ್ಬಲಗೆರೆಯವರ ‘ವಿಸ್ಮಯ ಕೀಟ ಪ್ರಪಂಚ’ ಕೃತಿ ಆಯ್ಕೆಯಾಗಿದೆ.

ಡಾ.ನೂರ್ ಸಮದ್ ಅವರು ನಾಲ್ಕು ವರ್ಷಗಳಿಂದ ಛಾಯಾಗ್ರಹಣ ಮಾಡಿ, ಕೀಟಗಳ ವಿಸ್ಮಯ ಕುರಿತ ಲೇಖನಗಳನ್ನು ‘ಪ್ರಜಾವಾಣಿ’ ದೈನಿಕದ ‘ಸಹಪಾಠಿ’ ಪುರವಣಿಗೆ ಬರೆಯುತ್ತಿದ್ದರು. ಅದರ ಪುಸ್ತಕ ರೂಪವೇ ‘ವಿಸ್ಮಯ ಕೀಟ ಪ್ರಪಂಚ’ ಕೃತಿ.

ದಿವಂಗತ ಯು.ಟಿ.ಫರೀದ್ ಸ್ಮರಣಾರ್ಥ ನೀಡುವ ಪ್ರಶಸ್ತಿ ₹10 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. 2023ರ ಜನವರಿಯಲ್ಲಿ ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್.ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.