ನಾಗಮಂಗಲ: ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ವ್ಯಕ್ತಿಯೊಬ್ಬರು ಮಗಳಿಗೆ ನೀಡಿದ್ದ ಮೊಬೈಲ್‌ನಿಂದ ಆತನ ಅನೈತಿಕ ಸಂಬಂಧ ಬಯಲಿಗೆ ಬಂದಿದೆ. 18 ವರ್ಷಗಳ ದಾಂಪತ್ಯ ಸಂಬಂಧ ಮುರಿದ್ದು ಬಿದ್ದಿದ್ದು ಪತಿ–ಪತ್ನಿ ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತಾಲ್ಲೂಕಿನ ತಾಲ್ಲೂಕಿನ ರಾಮಚಂದ್ರ ಅಗ್ರಹಾರ ಗ್ರಾಮದ ಕುಮಾರ್ ಆನ್‌ಲೈನ್ ತರಗತಿಗಾಗಿ ಮಗಳಿಗೆ ಮೊಬೈಲ್ ಫೋನ್ ಕೊಟ್ಟಿದ್ದರು. ಮೊಬೈಲ್ ಗ್ಯಾಲರಿಯಲ್ಲಿ ತಂದೆಯು ಅನ್ಯ ಮಹಿಳೆಯೊಂದಿಗೆ ಭಾಗಿಯಾದ ಖಾಸಗಿ ವಿಡಿಯೊ ಇತ್ತು. ಅದನ್ನು ಗಮನಿಸಿದ ಮಗಳು ತಾಯಿಯ ಗಮನಕ್ಕೆ ತಂದಿದ್ದರು. ಇದರಿಂದ ಪತಿ–ಪತ್ನಿಯರ ನಡುವೆ ಕಲಹಕ್ಕೆ ಕಾರಣವಾಗಿ ಇಬ್ಬರೂ ಬೇರ್ಪಟ್ಟಿದ್ದರು.

ಪ್ರೇಮವಿವಾಹ ಮಾಡಿಕೊಂಡಿದ್ದ ಇವರು ಕಳೆದ ಹಲವು ತಿಂಗಳುಗಳಿಂದ ಬೇರೆಬೇರೆ ವಾಸಿಸುತ್ತಿದ್ದರು. ಪತಿಯಿಂದ ನ್ಯಾಯ ಕೊಡಿಸುವಂತೆ ಕೋರಿ ಈಚೆಗೆ ಮಹಿಳೆ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸಂಧಾನವೂ ನಡೆದಿತ್ತು.

ಬೇರೆ ಮನೆ ಮಾಡಿ ಹೊಂದಾಣಿಕೆಯಿಂದ ಹೋಗುವುದಾಗಿ ಇಬ್ಬರೂ ತಿಳಿಸಿದ್ದರು. ಆದರೆ ಈಗ ಏಕಾಏಕಿ ಕುಮಾರ್ ಖಾಸಗಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಮಸ್ಯೆ ಉಲ್ಭಣಗೊಂಡಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.