ನಾಳೆ ಕೆಪಿಟಿಸಿಎಲ್ ನೌಕರರಿಂದ ಕೆಲಸ ಬಹಿಷ್ಕಾರ

ಬೆಂಗಳೂರು: 'ಖಾಸಗೀಕರಣಕ್ಕೆ ಪೂರಕವಾಗಿರುವ ವಿದ್ಯುಚ್ಛಕ್ತಿ ಕಾಯ್ದೆ (ತಿದ್ದುಪಡಿ) ಮಸೂದೆ-2021 ವಿರೋಧಿಸಿ ಆ.10ರಂದು ವಿದ್ಯುತ್ ಕ್ಷೇತ್ರದ ನೌಕರರು ಹಾಗೂ ಅಧಿಕಾರಿಗಳು ಕೆಲಸ ಬಹಿಷ್ಕರಿಸಲಿದ್ದೇವೆ' ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ನೌಕರರು ಮತ್ತು ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಟಿ.ಆರ್.ರಾಮಕೃಷ್ಣಯ್ಯ ತಿಳಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,' ನೂತನ ತಿದ್ದುಪಡಿ ಕಾಯ್ದೆ ವಿದ್ಯುತ್ ಕ್ಷೇತ್ರವನ್ನು ಅಪಾಯಕ್ಕೆ ಸಿಲುಕಿಸಲಿದೆ. ಸಾರ್ವಜನಿಕರಿಗೆ ಅಗತ್ಯವಾಗಿರುವ ವಿದ್ಯುತ್ ಸೌಲಭ್ಯ ಭವಿಷ್ಯದಲ್ಲಿ ದುಬಾರಿಯಾಗಲಿದೆ' ಎಂದು ಎಚ್ವರಿಸಿದರು.
'ವಿದ್ಯುತ್ ವಲಯ ಬಂಡವಾಳಶಾಹಿಗಳ ಅಧೀನಕ್ಕೆ ಒಳಪಟ್ಟರೆ, ಸಾರ್ವಜನಿಕರಿಗೆ ಮಾರಕವಾಗಿ ಪರಿಣಮಿಸಲಿದೆ. ಹಾಗಾಗಿ, ವಿದ್ಯುತ್ ವಲಯದ ಎಲ್ಲ ಸಿಬ್ಬಂದಿ ಕೆಲಸ ಬಹಿಷ್ಕರಿಸುವ ಮೂಲಕ ಚಳವಳಿ ನಡೆಸಲಿದ್ದೇವೆ. ಆದರೆ, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ' ಎಂದೂ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.