ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿಗೆ ಬಂತು ಆಮ್ಲಜನಕ ಬಸ್‌

ಎ.ಐ.ಸಿ.ಸಿ ವಕ್ತಾರ ಬ್ರಿಜೇಶ್ ಕಾಳಪ್ಪ ನೇತೃತ್ವದಲ್ಲಿ ಆರೋಗ್ಯ ಸೇವೆ: ಜಿಲ್ಲಾಧಿಕಾರಿಗೆ ಬಸ್‌ ಕೀ ಹಸ್ತಾಂತರ
Last Updated 5 ಜೂನ್ 2021, 13:06 IST
ಅಕ್ಷರ ಗಾತ್ರ

ಮಡಿಕೇರಿ: ಎ.ಐ.ಸಿ.ಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಮಾಜಿ ಸಚಿವರು ಹಾಗೂ ಶಾಸಕರೊಬ್ಬರ ಸಹಕಾರದೊಂದಿಗೆ ಆಮ್ಲಜನಕ ಬಸ್ ಸೇವೆ ಆರಂಭಿಸಿದ್ದು ಬಸ್‌ ಕೀ ಅನ್ನು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಶನಿವಾರ ಹಸ್ತಾಂತರ ಮಾಡಿದರು.

ಆಮ್ಲಜನಕ ಹಾಸಿಗೆ ಸಹಿತ ಸುಸಜ್ಜಿತ ಬಸ್ ಸೇವೆಯನ್ನು ಆರಂಭಿಸಲು ಮಾಜಿ ಸಚಿವ ಎಂ.ಕೃಷ್ಣಪ್ಪ ಹಾಗೂ ಶಾಸಕ ಪ್ರಿಯಾ ಕೃಷ್ಣ ಸಹಕಾರ ನೀಡಿದ್ದಾರೆ. ಜಿಲ್ಲಾಧಿಕಾರಿಗೆ ಕೀ ಹಸ್ತಾಂತರ ಮಾಡಲಾಗಿದೆ. ಈ ಬಸ್‌ನಲ್ಲಿ ಸೇವೆಯನ್ನು ಆರೋಗ್ಯ ಇಲಾಖೆ ಬಳಕೆ ಮಾಡಿಕೊಳ್ಳಬಹುದು. ಒಬ್ಬ ಖಾಸಗಿ ಶುಶ್ರೂಷಕಿ ಹಾಗೂ ಬಸ್ ಚಾಲಕ ಕಾರ್ಯ ನಿರ್ವಹಿಸಲಿದ್ದಾರೆ. ಇವರಿಬ್ಬರಿಗೆ ವೇತನ, ಡೀಸೆಲ್, ಆಕ್ಸಿಜನ್ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ನಾವೇ ಭರಿಸುತ್ತಿದ್ದೇವೆ ಎಂದು ಬ್ರಿಜೇಶ್‌ ಕಾಳಪ್ಪ ಅವರು ತಿಳಿಸಿದರು.

ಬಸ್‌ನಲ್ಲಿ ಆಮ್ಲಜನಕ ಸಹಿತ 30 ಬೆಡ್‌ಗಳಿದ್ದು, ಸೋಂಕಿತರ ಸೇವೆಗೆ ಸಿದ್ಧವಾಗಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಈ ಬಸ್ ನೆರವಿಗೆ ಬರಲಿದೆ. ರಾಜ್ಯದಲ್ಲಿ ಬೆಂಗಳೂರು ಹೊರತು ಪಡಿಸಿದರೆ ಕೊಡಗು ಆಮ್ಲಜನಕ ಬಸ್ ಸೌಲಭ್ಯ ಪಡೆದ ಮೊದಲ ಜಿಲ್ಲೆಯಾಗಿದೆ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದರು.

ಈ ಸ್ಲೀಪರ್ ಕೋಚ್ ಬಸ್‍ನಲ್ಲಿ ಮೇಲೆ 15 ಮತ್ತು ಕೆಳಗೆ 15 ಬೆಡ್‍ಗಳಿರುತ್ತವೆ. ಎಂಟು ಆಮ್ಲಜನಕ ಸಿಲಿಂಡರ್‌ಗಳು ಸಿದ್ಧ ಇರಲಿವೆ. ಅನಿವಾರ್ಯ ಪರಿಸ್ಥಿತಿ ಎದುರಾದರೆ 16 ಬೆಡ್‍ಗಳಿಗೆ ಇದನ್ನು ಬಳಸಬಹುದಾಗಿದೆ. ಆಮ್ಲಜನಕ ಖಾಲಿಯಾದರೆ ಮೈಸೂರಿನಿಂದ ಭರ್ತಿ ಮಾಡಿ ತರಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಪ್ರತಿಯೊಬ್ಬರಿಗೂ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ತುರ್ತು ಸ್ಪಂದನೆ ನೀಡುವಲ್ಲಿ ಸಂಚಾರಿ ಬಸ್ ಸಹಕಾರಿಯಾಗಲಿದೆ. ಕೋವಿಡ್ 19 ಸೋಂಕಿತ ಪ್ರಕರಣಗಳು ಕಂಡುಬರುವ ತನಕ ಬಸ್ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಬ್ರಿಜೇಶ್ ಕಾಳಪ್ಪ ಅವರು ಮಾಹಿತಿ ನೀಡಿದರು.

ಇದನ್ನು ಜಿಲ್ಲಾಡಳಿತ ತನ್ನ ವಿವೇಚನೆಗೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ. ಆದರೆ ಎಲ್ಲಾ ಖರ್ಚು ವೆಚ್ಚಗಳನ್ನು ನಾವೇ ಭರಿಸುತ್ತೇವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಪ್ರತಿಯೊಬ್ಬರಿಗೂ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ತುರ್ತು ಸ್ಪಂದನೆ ನೀಡುವಲ್ಲಿ ಸಂಚಾರಿ ಬಸ್ ಸಹಕಾರಿಯಾಗಲಿದೆ. ಕೋವಿಡ್ 19 ಸೋಂಕಿತ ಪ್ರಕರಣಗಳು ಕಂಡುಬರುವ ತನಕ ಬಸ್ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಬ್ರಿಜೇಶ್ ಕಾಳಪ್ಪ ಅವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಹಾಗೂ ಕೊಡಗು ಕಾಂಗ್ರೆಸ್‌ ಮುಖಂಡರು ಬಸ್ ಅನ್ನು ವೀಕ್ಷಣೆ ಮಾಡಿದರು.

ಕೀ ಹಸ್ತಾಂತರ ಸಮಾರಂಭದಲ್ಲಿ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್‌ ಹಿರಿಯ ಮುಖಂಡ ಟಿ.ಪಿ.ರಮೇಶ್‌, ಬಾನಂಡ ಪ್ರಥ್ಯು, ಕೆ.ಪಿ.ಚಂದ್ರಕಲಾ, ರಾಜೇಶ್ ಯಲ್ಲಪ್ಪ, ತೆನ್ನೀರ ಮೈನಾ, ಮುನಿರ್ ಅಹ್ಮದ್, ಪ್ರಕಾಶ್ ಆಚಾರ್ಯ, ನವೀನ್, ಇಸ್ಮಾಯಿಲ್, ಉಸ್ಮಾನ್, ಐ.ಜಿ.ಚಿಣ್ಣಪ್ಪ, ಕೋಡೀರ ವಿನೋದ್ ನಾಣಯ್ಯ, ಸೂರಜ್, ಮುತ್ತುರಾಜ್, ಸುಧೀರ್, ಮಧು, ಹನೀಫ್ ಸಂಪಾಜೆ, ಹಂಸು, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ನೋಡಲ್ ಅಧಿಕಾರಿ ಅನಿಲ್ ಬಗಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT