ಸೋಮವಾರ, ಏಪ್ರಿಲ್ 19, 2021
32 °C

ಮೀಸಲಾತಿ ಭಿಕ್ಷೆಯಲ್ಲ, ಹಕ್ಕು: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಂಚಮಸಾಲಿ ಸಮುದಾಯದ ಪಾಲಿಗೆ ಮೀಸಲಾತಿ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ಸಂವಿಧಾನದ ಅಡಿಯಲ್ಲಿ ಇತರರಿಗೆ ಕೊಟ್ಟ ಹಕ್ಕನ್ನು ನಮಗೂ ಕೊಡಿ ಎಂಬುದೇ ನಮ್ಮ ಬೇಡಿಕೆ’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ‘ಸಮುದಾಯದ ಬಡ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಹೋರಾಟ ನಡೆಯುತ್ತಿದೆ. 26 ವರ್ಷಗಳಿಂದಲೂ ನಡೆಯುತ್ತಿದೆ. ನಾವು ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಕೇಳುತ್ತಿದ್ದೇವೆ’ ಎಂದರು.

2007 ರವರೆಗೂ ಪಂಚಮಸಾಲಿ ಸಮುದಾಯ ಕರ್ನಾಟಕದ ಜಾತಿ ಪಟ್ಟಿಯಲ್ಲಿ ಇರಲೇ ಇಲ್ಲ. ಸಮುದಾಯದ ರಾಜ್ಯ ಸಂಘದಿಂದ ಹೋರಾಟ ನಡೆಸಿದ ಫಲವಾಗಿ 2007ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮುದಾಯವನ್ನು ಜಾತಿ ಪಟ್ಟಿಗೆ ಸೇರಿಸಿದರು. ಆ ನಂತರ ಸಮುದಾಯಕ್ಕೆ ನ್ಯಾಯ ದೊರಕಿಲ್ಲ‘ ಎಂದು ಹೇಳಿದರು.

ಈಗ ಅದೇ ಯಡಿಯೂರಪ್ಪ ಸಮುದಾಯದ ಬೇಡಿಕೆ ಈಡೇರಿಸುತ್ತಾರೆ ಎಂಬ ಭರವಸೆ ಇದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸುವ ಅಧಿಕಾರ ಕೇಂದ್ರ ಸರ್ಕಾರದ್ದಲ್ಲ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಯ ಅಧಿಕಾರ’ ಎಂದು ಹೇಳಿದರು.

ಈ ಹೋರಾಟ ಯಾವುದೇ ಪಕ್ಷ ಅಥವಾ ವ್ಯಕ್ತಿಯ ವಿರುದ್ಧದ ಪ್ರತಿಭಟನೆ ಅಲ್ಲ. ಯಾರನ್ನೂ ಮೆಚ್ಚಿಸುವ ಅಥವಾ ಬೇಸರ ಮೂಡಿಸುವ ಉದ್ದೇಶದ್ದೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ಜನರಲ್ಲಿ ಸಂಶಯವಿತ್ತು

‘ಪಾದಯಾತ್ರೆಗೆ ಹರಿಹರ ಪೀಠ ಬೆಂಬಲಿಸುವುದಿಲ್ಲ, ಎರಡೂ ಪೀಠಗಳ ನಡುವೆ ಸಹಮತ ಇಲ್ಲ ಎಂಬ ಭಾವನೆ ಅನೇಕರಲ್ಲಿತ್ತು. ಪಾದಯಾತ್ರೆ ಹರಿಹರಕ್ಕೆ ಬಂದಾಗ ಹೋರಾಟ ವಿಫಲವಾಗುತ್ತದೆ ಎಂದು ಊಹಿಸಿದ್ದರು. ಆದರೆ, ನಾವಿಬ್ಬರೂ ಒಂದೇ ಆಗಿದ್ದೀವಿ. ಬಹಿರಂಗವಾಗಿ ಒಂದಾಗಿದ್ದೇವೆ. ಅದಕ್ಕಾಗಿ ನಾಯಕರು, ಜನರು ಒಂದಾದರು’ ಎಂದು ಸ್ವಾಮೀಜಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು