banga: ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯಲ್ಲಿ ಜನವರಿಯಲ್ಲಿ ಒಟ್ಟು 13.36 ಲಕ್ಷ ಹೊಸ ಚಂದಾದಾರರು ನೋಂದಣಿಯಾಗಿದ್ದಾರೆ.

‘ಕೋವಿಡ್ ಬಿಕ್ಕಟ್ಟಿನ ಹೊರತಾಗಿಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಭವಿಷ್ಯನಿಧಿ ಯೋಜನೆಯ ಅಡಿಯಲ್ಲಿ 62.49 ಲಕ್ಷ ಚಂದಾದಾರರು ಸೇರ್ಪಡೆಯಾಗಿದ್ದಾರೆ. 2020ರ ಡಿಸೆಂಬರ್‌ಗೆ ಹೋಲಿಸಿದರೆ 2021ರ ಜನವರಿಯಲ್ಲಿ ಶೇ 24ರಷ್ಟು ಬೆಳವಣಿಗೆಯಾಗಿದೆ. ವರ್ಷದಿಂದ ವರ್ಷಕ್ಕೆ ಚಂದಾದಾರರ ಸಂಖ್ಯೆಯಲ್ಲಿ ಶೇ 27.79ರಷ್ಟು ಹೆಚ್ಚಳವಾಗಿರುವುದು ಅಂಕಿ ಅಂಶದಿಂದ ತಿಳಿದುಬಂದಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಕೋವಿಡ್ ಸಮಯದಲ್ಲಿ ಭವಿಷ್ಯನಿಧಿ ಸಂಘಟನೆಯು ತಡೆರಹಿತ ಆನ್‌ಲೈನ್ ಸೇವೆಗಳನ್ನು ಒದಗಿಸಿತ್ತು. ಜೊತೆಗೆ ಭಾರತ ಸರ್ಕಾರದ ಎಬಿಆರ್‌ವೈ, ಪಿಎಂಜಿಕೆವೈ ಮತ್ತು ಪಿಎಂಆರ್‌ಪಿವೈ ಯೋಜನೆಗಳೂ ಈ ಬೆಳವಣಿಗೆಗೆ ಕಾರಣ. ಸದಸ್ಯರು ಕೆಲಸ ಬದಲಿಸುವಾಗ ತಮ್ಮ ಭವಿಷ್ಯ ನಿಧಿ ಹಣ ವರ್ಗಾಯಿಸಲು ಸ್ವಯಂ ವರ್ಗಾವಣೆ ಸೇವೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಅವರ ಸದಸ್ಯತ್ವದಲ್ಲಿ ನಿರಂತರತೆ ಕಂಡುಬರುತ್ತಿದೆ’ ಎಂದೂ ಹೇಳಲಾಗಿದೆ.

‘ಈ ವರ್ಷದ ಜನವರಿಯಲ್ಲಿ ಸುಮಾರು 2.61 ಲಕ್ಷ ಮಹಿಳಾ ಚಂದಾದಾರರು ಸೇರ್ಪಡೆಯಾಗಿದ್ದಾರೆ. ಡಿಸೆಂಬರ್‌ಗೆ ಹೋಲಿಸಿದರೆ ಈ ಪ್ರಮಾಣ ಶೇ 30ರಷ್ಟು ಹೆಚ್ಚಿದೆ’ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.