ಪೊಲೀಸ್ ಅಧಿಕಾರಿಗಳ ವರ್ಗಾವಣೆ: ಚನ್ನಣ್ಣವರ, ದೇವರಾಜು ಸಿಐಡಿಗೆ

ಬೆಂಗಳೂರು: ಐಪಿಎಸ್ ಅಧಿಕಾರಿಗಳಾದ ರವಿ ಡಿ.ಚನ್ನಣ್ಣನವರ ಮತ್ತು ಕೆ.ಜಿ.ದೇವರಾಜು ಅವರನ್ನು ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಇವರೂ ಸೇರಿ ಒಟ್ಟು 12 ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆಯಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳು:
ರಾಹುಲ್ ಕುಮಾರ್ ಶಹಪೂರವಾಡ್– ಎಸ್ಪಿ, ತುಮಕೂರು ಜಿಲ್ಲೆ , ಡಾ.ವಂಶಿ ಕೃಷ್ಣ– ಎಸ್ಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಾ.ಎ.ಎನ್.ಪ್ರಕಾಶ್ ಗೌಡ– ಎಸ್ಪಿ ಐಎಸ್‌ಡಿ, ಬೆಂಗಳೂರು, ಪ್ರದೀಪ್ ಗುಂಟಿ– ಉಪ ಪೊಲೀಸ್ ಆಯುಕ್ತ, ಕಾನೂನು– ಸುವ್ಯವಸ್ಥೆ, ಮೈಸೂರು ನಗರ, ದೆಕ್ಕಾ ಕಿಶೋರ್ ಬಾಬು– ಎಸ್ಪಿ, ಕೋಲಾರ ಜಿಲ್ಲೆ , ಅಡ್ಡೂರು ಶ್ರೀನಿವಾಸುಲು– ಉಪ ಪೊಲೀಸ್ ಆಯುಕ್ತ, ಕಾನೂನು ಮತ್ತು ಸುವ್ಯವಸ್ಥೆ, ಕಲಬುರ್ಗಿ ನಗರ.
ಹನುಮಂತರಾಯ– ಎಸ್ಪಿ, ಹಾವೇರಿ ಜಿಲ್ಲೆ, ಆರ್.ಚೇತನ– ಎಸ್ಪಿ, ಮೈಸೂರು ಜಿಲ್ಲೆ, ಸಿ.ಬಿ.ರಿಷ್ಯಂತ್– ಎಸ್ಪಿ, ದಾವಣಗೆರೆ ಜಿಲ್ಲೆ, ಕಾರ್ತಿಕ್ ರೆಡ್ಡಿ–ಎಸ್ಪಿ, ನಿಸ್ತಂತು ವಿಭಾಗ, ಬೆಂಗಳೂರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.