ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌ 2021 – ನಿಯಮಗಳು, ಷರತ್ತುಗಳು

Last Updated 5 ಜನವರಿ 2021, 11:18 IST
ಅಕ್ಷರ ಗಾತ್ರ

ಸಾಮಾನ್ಯ ಸೂಚನೆಗಳು

ದ ಪ್ರಿಂಟರ್ಸ್(ಮೈಸೂರು) ಪ್ರೈವೇಟ್ ಲಿಮಿಟೆಡ್ ಆಯೋಜಿಸುತ್ತಿರುವ ಪ್ರಜಾವಾಣಿ ಕ್ವಿಜ಼್ ಚ್ಯಾಂಪಿಯನ್‌ಶಿಪ್ 2021 ಒಂದು ವರ್ಚುವಲ್ ರಸಪ್ರಶ್ನೆ ಕಾರ್ಯಕ್ರಮವಾಗಿದೆ, ಅರ್ಥಾತ್ ಈ ರಸಪ್ರಶ್ನೆಗೆ ಸಂಬಂಧಿಸಿದ ಪೂರ್ವಭಾವಿ ಪರೀಕ್ಷೆಯಿಂದ ಹಿಡಿದು ರಾಜ್ಯಮಟ್ಟದ ಅಂತಿಮ ಸುತ್ತಿನವರೆಗಿನ ಎಲ್ಲಾ ಸುತ್ತುಗಳೂ ಆನ್‌ಲೈನ್ ಮೂಲಕ ನಡೆಯಲಿವೆ.

• ಪ್ರತಿಯೊಬ್ಬ ಸ್ಪರ್ಧಿಯು ಏಕಾಂಗಿಯಾಗಿ ಸ್ಪರ್ಧೆಯಲ್ಲಿ ಭಾಗವಹಿಸಬೇಕಿದ್ದು, ಯಾವುದೇ ತಂಡಗಳನ್ನು ರಚಿಸುವ ಅಗತ್ಯವಿರುವುದಿಲ್ಲ. 5ನೇ ತರಗತಿಯಿಂದ 10ನೇ ತರಗತಿಯವರೆಗೆ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

• ಸ್ಪರ್ಧಿಗಳು ಶಾಲೆಯಿಂದ ನೀಡಲಾದ ಅಧಿಕೃತ ಗುರುತಿನ ಚೀಟಿ ಹೊಂದಿರಬೇಕು. ಒಂದು ವೇಳೆ ಗುರುತಿನ ಚೀಟಿ ಇಲ್ಲದಿದ್ದಲ್ಲಿ, ಅವಶ್ಯವಿದ್ದಾಗ ಶಾಲೆಯ ವತಿಯಿಂದ ನೀಡಲಾದ ಅರ್ಹತಾ ಪತ್ರವನ್ನು ಒದಗಿಸಬೇಕಿರುತ್ತದೆ. ಮುಂದಿನ ಸುತ್ತಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಪೋಷಕರಿಂದ ಯಾವುದೇ ಆಕ್ಷೇಪಣೆ ಇಲ್ಲವೆಂದು ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಬೇಕಿರುತ್ತದೆ.

• ಒಂದು ವಲಯದಿಂದ ಒಮ್ಮೆ ಭಾಗವಹಿಸಿದ ಸ್ಪರ್ಧಿ ಇನ್ಯಾವುದೇ ವಲಯದಲ್ಲಿ ಇನ್ನೊಮ್ಮೆ ಭಾಗವಹಿಸುವಂತಿಲ್ಲ.
• ಸ್ಪರ್ಧಿಗಳು ತಮ್ಮ ಪೋಷಕರು / ಶಾಲೆಯಿಂದ ಸರಿಯಾದ ಮಾರ್ಗದರ್ಶನ ಪಡೆದು ತಮ್ಮ ಸ್ವಯಿಚ್ಛೆಯಿಂದ ಭಾಗವಹಿಸಬೇಕಿರುತ್ತದೆ.

• ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯುತ್ತದೆ- ವಲಯಮಟ್ಟ ಹಾಗೂ ರಾಜ್ಯಮಟ್ಟ.

ವಲಯಮಟ್ಟದ ಸ್ಪರ್ಧೆಯಲ್ಲಿ ಒಟ್ಟು ಎರಡು ಸುತ್ತುಗಳಿರುತ್ತವೆ:

- ಮೊದಲಿಗೆ ಆಯ್ಕೆ ಆಧಾರಿತ ಪ್ರಶ್ನೆಗಳಿರುವ ಆನ್‌ಲೈನ್ ಪೂರ್ವಭಾವಿ ಸುತ್ತು ನಡೆಯುತ್ತದೆ. ಇದರಲ್ಲಿ ಆಯ್ಕೆಯಾದ ಅಗ್ರ 6 ಸ್ಪರ್ಧಿಗಳು ಮುಂದಿನ ಹಂತದ ಸುತ್ತಿನಲ್ಲಿ ಭಾಗವಹಿಸುತ್ತಾರೆ.

ನಂತರ ನಿಗದಿತ ಸಮಯದಲ್ಲಿ ಕ್ವಿಜ್ ಮಾಸ್ಟರ್, ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ 6 ಸ್ಪರ್ಧಿಗಳನ್ನು ಸಂಪರ್ಕಿಸಿ, ವೇದಿಕೆಯ ಮೇಲೆ ನಡೆಯುವ ಕ್ವಿಜ್ ಮಾದರಿಯಲ್ಲೇ ಆನ್‌ಲೈನ್ ಕ್ವಿಜ಼್ ನಡೆಸಿಕೊಡಲಿದ್ದಾರೆ. ಈ ಸುತ್ತಿನ ವಿಜೇತರು ತಮ್ಮ ವಲಯವನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಲಿದ್ದಾರೆ.

• ಪ್ರತಿ ವಲಯದ ಒಬ್ಬ ವಿಜೇತ ಸ್ಪರ್ಧಿ ರಾಜ್ಯಮಟ್ಟದಲ್ಲಿ ಭಾಗವಹಿಸಲು ಆಯ್ಕೆಯಾಗುತ್ತಾರೆ ಈ ಸುತ್ತನ್ನೂ ಕೂಡ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತದೆ.

• ಇದೊಂದು ದ್ವಿಭಾಷಾ ಸ್ಪರ್ಧೆಯಾಗಿದೆ. ಪೂರ್ವಭಾವಿ ಸುತ್ತಿನಲ್ಲಿ ಪರದೆಯ ಮೇಲೆ ಪ್ರಶ್ನೆಗಳು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಮೂಡುತ್ತವೆ. ವಲಯ ಮಟ್ಟದ ಫೈನಲ್ಸ್ ಹಾಗೂ ಗ್ರ್ಯಾಂಡ್ ಫಿನಾಲೆಯಲ್ಲಿ ಕ್ವಿಜ್ ಮಾಸ್ಟರ್ ಎರಡೂ ಭಾಷೆಗಳಲ್ಲಿ ಪ್ರಶ್ನೆಯನ್ನು ಓದಿ ತಿಳಿಸುತ್ತಾರೆ.

• ಸ್ಪರ್ಧೆಯ ನಿಯಮಗಳನ್ನು ಯಾವುದೇ ಹಂತದಲ್ಲಿ ಬದಲಾಯಿಸುವ ಹಕ್ಕು ಸಂಘಟಕರಿಗಿರುತ್ತದೆ.

• ವಿದ್ಯಾರ್ಥಿಗಳು ಯಾವುದೇ ರೀತಿಯ ಆಕಾರ್ಯಗಳಲ್ಲಿ ತೊಡಗಬಾರದಾಗಿದ್ದು, ಹಾಗೊಂದು ವೇಳೆ ಅಂತಹ ಅಚಾತುರ್ಯ ಕಂಡು ಬಂದಲ್ಲಿ ಸ್ಪರ್ಧೆಯಿಂದ ಹೊರಹಾಕಲಾಗುತ್ತದೆ.

• ಪೂರ್ವಭಾವಿ ಸುತ್ತು ಟೈ ಬ್ರೇಕರ್ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಒಂದು ವೇಳೆ ಟೈ ಅಂಕವೂ ಸಮನಾಗಿದ್ದರೆ, ಪೂರ್ವಭಾವಿ ಸುತ್ತನ್ನು ಪೂರ್ಣಗೊಳಿಸಲು ಸ್ಪರ್ಧಿಗಳು ತೆಗೆದುಕೊಂಡಿರುವ ಸಮಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

• ಸ್ಪರ್ಧೆಯ ಯಾವುದೇ ಹಂತದಲ್ಲಿ, ಯಾವುದೇ ವಿಷಯದ ಕುರಿತಾಗಿ ತಕರಾರು ಎದ್ದರೂ, ಕ್ವಿಜ಼್ ಮಾಸ್ಟರ್ ಅವರೊಂದಿಗೆ ಚರ್ಚಿಸಿ ಪ್ರಜಾವಾಣಿ / ಟಿಪಿಎಂಎಲ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ ಹಾಗೂ ಸ್ಪರ್ಧಿಗಳು ಇದನ್ನು ಸ್ವೀಕರಿಸಬೇಕಿರುತ್ತದೆ.

• ಪರೀಕ್ಷೆಯ ಮಾದರಿಯನ್ನು ಹಾಗೂ ವಿಷಯಗಳ ಆಯ್ಕೆಯನ್ನು ಸರಿಯಾಗಿ ಅರಿತುಕೊಳ್ಳಲು , ವಿದ್ಯಾರ್ಥಿಗಳು ಈ ಪೋರ್ಟಲ್ನಲ್ಲಿರುವ ಅಣಕ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡುತ್ತೇವೆ.

• ಪ್ರತಿ ಸ್ಪರ್ಧಿಯು ಇಲ್ಲಿರುವ ನಿಯಮಗಳನ್ನು ಓದಿ, ಅರ್ಥೈಸಿಕೊಂಡಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ತಾವು ಈ ನಿಯಮಗಳಿಗೆ ಬದ್ಧರಾಗಿರುವುದಾಗಿ ಸೂಚಿಸಬೇಕು.ಕೇವಲ ಈ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಯಾವುದೇ ಸ್ಪರ್ಧಿಯನ್ನು ವಿಜೇತರನ್ನಾಗಿ ಘೋಷಿಸುವ ಬದ್ಧತೆಗೆ ಪ್ರಜಾವಾಣಿ ಒಳಪಟ್ಟಿರುವುದಿಲ್ಲ. ಇಲ್ಲಿನ ಯಾವ ಅಂಶವೂ ಪ್ರಜಾವಾಣಿ ಇನ್ನೂ ಮುಂದೆ, ಇದೇ ರೀತಿಯ ಅಥವಾ ಬೇರೆ ಸ್ಪರ್ಧೆಗಳನ್ನು ಭವಿಷ್ಯದಲ್ಲಿ ನಡೆಸಬೇಕಾದ ಬದ್ಧತೆಯನ್ನು ಸೂಚಿಸುವುದಿಲ್ಲ.

ನಿಯಮ ಮತ್ತು ನಿಬಂಧನೆಗಳು

• ಈ ಸ್ಪರ್ಧೆಗೆ ಸಂಬಂಧಿಸಿದಂತೆ ಉದ್ಭವಿಸಬಹುದಾದ ಯಾವುದೇ ಹಕ್ಕುಕೋರಿಕೆ, ನಷ್ಟಗಳು, ಹಾನಿ, ಖರ್ಚು ಅಥವಾ ವೆಚ್ಚಗಳು, ಬಹುಮಾನಗಳ ಬಿಡುಗಡೆ ಅಥವಾ ಬಳಕೆಯ ವಿಷಯದಲ್ಲಿ ಟಿಪಿಎಂಎಲ್ ಯಾವುದೇ ರೀತಿಯಲ್ಲಿ ಜವಾಬ್ದಾರನಾಗಿರುವುದಿಲ್ಲ.

• ಅನ್ವಯವಾಗುವ ಕಾನೂನುಗಳಿಗೆ ಒಳಪಟ್ಟು, ಈ ನಿಯಮಗಳು ಮತ್ತು ಷರತ್ತುಗಳ,ಈ ಸ್ಪರ್ಧೆಗೆ ಪ್ರವೇಶಿಸುವುದರ ಅಥವಾ ಬಹುಮಾನದ ಯಾವುದೇ ಭಾಗವನ್ನು ಸ್ವೀಕರಿಸುವುದರ ಪರಿಣಾಮವಾಗಿ ಯಾವುದೇ ಸ್ಪರ್ಧಿ ಅನುಭವಿಸಬಹುದಾದ ಯಾವುದೇ ರೀತಿಯ ನಷ್ಟಗಳು, ತೆರಿಗೆಗಳು, ಹೊಣೆಗಾರಿಕೆಗಳು ಅಥವಾ ಅನಾನುಕೂಲತೆಗಳಿಗೆ ಟಿಪಿಎಂಎಲ್ ಜವಾಬ್ದಾರನಾಗಿರುವುದಿಲ್ಲ.

* ಅನ್ವಯಯವಾಗುವ ಕಾನೂನಿಗೆ ಅನುಸಾರವಾಗಿ ವಿಜೇತರ ಮತ್ತು ಭಾಗಿಯಾದವರ ಚಿತ್ರಗಳು, ಭಾವಚಿತ್ರಗಳನ್ನು, ಹೆಸರನ್ನು ತನ್ನ ಪ್ರಚಾರ, ಉತ್ತೇಜನ ಚಟುವಟಿಕೆಗೆ ಸಾಮಗ್ರಿಯಾಗಿ ಪೂರ್ವಭಾವಿ ಒಪ್ಪಿಗೆ ಪಡೆಯದೇ ಜಾಹೀರಾತು, ಮಾರ್ಕೆಟಿಂಗ್‌ ಸಂದರ್ಭದಲ್ಲಿ ಬಳಸುವ ಹಕ್ಕನ್ನು ಟಿಪಿಎಂಎಲ್‌ ಕಾಯ್ದುಕೊಂಡಿರುತ್ತವೆ. ಇದಕ್ಕೆ ಹೆಚ್ಚುವರಿಯಾಗಿ ಯಾವುದೇ ಪರಿಹಾರ/ ಭತ್ಯೆ ನೀಡಲಾಗುವುದಿಲ್ಲ.

* ಸ್ಪರ್ಧಿಗಳ ಅರ್ಹತೆಗೆ ಸಂಬಂಧಪಟ್ಟಂತೆ ಯಾವುದೇ ಅನುಮಾನ ಎದ್ದ ಸಂದರ್ಭದಲ್ಲಿ ಸಂಬಂಧಿಸಿದ ಆಧಾರಗಳನ್ನು ಬಯಸುವ ಹಕ್ಕನ್ನು ಟಿಪಿಎಂಎಲ್‌ ಹೊಂದಿರುತ್ತದೆ.

* ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿ ಯಾವುದೇ ಸ್ಪರ್ಧಿಗೆ ಅನಾನುಕೂಲತೆಯಾದಲ್ಲಿ ಟಿಪಿಎಂಎಲ್‌ ಇದರ ಹೊಣೆಯನ್ನು ವಹಿಸಿಕೊಳ್ಳುವುದಿಲ್ಲ. 1) ಕಳೆದುಹೋದ/ ತಡವಾದ/ ಪ್ರವೇಶ ತಲುಪದೇ ಹೋದ ಸಂದರ್ಭದಲ್ಲಿ,2) ಯಾವುದೇ ತಾಂತ್ರಿಕ ದೋಷ/ ವೈಫಲ್ಯ ಅಥವಾ ಪ್ರವೇಶ ಪ್ರಕ್ರಿಯೆಯಲ್ಲಿ ಅಡಚಣೆ 3) ಯಾವುದೇ ತೊಂದರೆಯಿಂದ ಸ್ಪರ್ಧಿಗೆ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕ ಸಾಧ್ಯವಾಗದೇ ಹೋದರೆ, 4) ಯಾವುದೇ ಅಭೂತಪೂರ್ವ/ ಅನಿರೀಕ್ಷಿತ) ಪರಿಸ್ಥಿತಿ ತಲೆದೋರಿದಲ್ಲಿ ಚಾಲ್ತಿಯಲ್ಲಿರುವ ಷರತ್ತು , ನಿಬಂಧನೆಗಳ ಜೊತೆ, ಪೂರ್ವಭಾವಿಯಾಗಿ ಯಾವುದೇ ಸೂಚನೆ ನೀಡದೇ ಟಿಪಿಎಂಎಲ್‌ ಬೇರಾವುದೇ ನಿಯಮ ಅನ್ವಯಿಸಬಹುದು. ಟಿಪಿಎಂಎಲ್‌ ಸೂಕ್ತವೆಂದು ಪರಿಗಣಿಸುವ ನಿಯಮಗಳನ್ನು ಸ್ಪರ್ಧಿಗಳು ಗಮನಿಸುತ್ತಿರಬೇಕು.

ಪ್ರತಿ ಸ್ಪರ್ಧಿಗೆ ಪ್ರತ್ಯೇಕವಾಗಿ ತಿಳಿಸುವ ಹೊಣೆಯನ್ನು ಟಿಪಿಎಂಎಲ್‌ ವಹಿಸಿಕೊಳ್ಳುವುದಿಲ್ಲ.

* ಯಾವುದೇ ಸಂದರ್ಭದಲ್ಲಿ i )ಸ್ಪರ್ಧೆಯ ಅವಧಿ ವಿಸ್ತರಿಸುವ ii ) ಸ್ಥಗಿತಗೊಳಿಸುವ ಅಥವಾ ಅಮಾನತ್ತಿನಲ್ಲಿಡುವ iii)ಪರಿಸ್ಥಿತಿ ನಿಯಂತ್ರಣ ಮೀರಿದಲ್ಲಿ ಸ್ಪರ್ಧೆಯ ಅವಧಿಯನ್ನು ಮೊಟಕುಗೊಳಿಸುವIV) ಬಹುಮಾನವನ್ನು ಬದಲಾಯಿಸುವ (ಪೂರ್ಣ ಅಥವಾ ಭಾಗವಾಗಿ) ಅಧಿಕಾರವನ್ನು ಟಿಪಿಎಂಎಲ್‌ ಹೊಂದಿದೆ.

* ಟಿಪಿಎಂಎಲ್‌ ನಿರ್ಧಾರವೇ ಅಂತಿಮ ಮತ್ತು ಪಾಲನೆಯಾಗತಕ್ಕದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT