ಬುಧವಾರ, ಆಗಸ್ಟ್ 17, 2022
25 °C
ಅಜೀಂ ಪ್ರೇಮ್‌ಜಿಗೆ ಪ್ರೆಸ್‌ಕ್ಲಬ್‌ ವರ್ಷದ ವ್ಯಕ್ತಿ ಪ್ರಶಸ್ತಿ, ‘ಪ್ರೆಸ್‌ಕ್ಲಬ್‌ ವಿಶೇಷ ಪ್ರಶಸ್ತಿ’ಗೆ ನಟ ಸುದೀಪ್‌ ಹಾಗೂ ನಾರಾಯಣ ಹೆಲ್ತ್‌ನ ಅಧ್ಯಕ್ಷ ಡಾ.ದೇವಿಪ್ರಸಾದ್‌ ಶೆಟ್ಟಿ ಆಯ್ಕೆ

'ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ'ಗೆ ಪ್ರಜಾವಾಣಿಯ ವೈ.ಗ.ಜಗದೀಶ್ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ನೀಡಲಾಗುವ ‘ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ’ಗೆ ವಿಪ್ರೊ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಹಾಗೂ ‘ಪ್ರೆಸ್‌ಕ್ಲಬ್‌ ವಿಶೇಷ ಪ್ರಶಸ್ತಿ’ಗೆ ನಟ ಸುದೀಪ್‌ ಹಾಗೂ ನಾರಾಯಣ ಹೆಲ್ತ್‌ನ ಅಧ್ಯಕ್ಷ ಡಾ.ದೇವಿಪ್ರಸಾದ್‌ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

‘ಪ್ರಜಾವಾಣಿ’ಯ ರಾಜಕೀಯ ಬ್ಯೂರೊ ಮುಖ್ಯಸ್ಥ ವೈ.ಗ.ಜಗದೀಶ್‌ ಸೇರಿದಂತೆ 25 ಮಂದಿ ‘ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. 

ವಾರ್ಷಿಕ ಪ್ರಶಸ್ತಿ ಪುರಸ್ಕೃತರು 

ಎಸ್.ದೇವನಾಥ್, ಎಸ್‌.ಕೆ.ಶೇಷಚಂದ್ರಿಕ, ಜಿ.ಎಸ್.ನಾರಾಯಣ ರಾವ್, ಎಚ್‌.ಬಿ.ದಿನೇಶ್, ಸಿ.ಎಸ್.ದ್ವಾರಕಾನಾಥ್, ಮುಂಜಾನೆ ಸತ್ಯ, ಗೇಬ್ರಿಯಲ್ ವಾಝ್, ಸಾಗ್ಗೆರೆ ರಾಮಸ್ವಾಮಿ, ಶಾಂತಲಾ ಧರ್ಮರಾಜ್, ಉದಯ ಮರಕಿಣಿ, ಎಸ್‌.ಕೆ.ಶ್ಯಾಮಸುಂದರ್, ಎಂ.ಸಿ.ಪಾಟೀಲ, ಆರ್‌.ಶ್ರೀಧರ್, ಇಂದ್ರಜಿತ್ ಲಂಕೇಶ್, ಕೆ.ಎಂ.ಮನು ಅಯ್ಯಪ್ಪ, ಎಸ್‌.ಲಕ್ಷ್ಮೀನಾರಾಯಣ, ಪರಮೇಶ್ವರ್ ಗುಂಡ್ಕಲ್, ರಾಘವೇಂದ್ರ ಹುಣಸೂರು, ಕೆ.ಆದಿನಾರಾಯಣ ಮೂರ್ತಿ, ವಿಶ್ವನಾಥ ಸುವರ್ಣ, ಸುಧಾಕರ ಕೆ.ದರ್ಬೆ, ಎಂ.ಎಸ್.ಮಣಿ, ಆರ್‌.ಎಚ್‌.ನಟರಾಜ್.

‘ವರ್ಷದ ವ್ಯಕ್ತಿ ಮತ್ತು ವಿಶೇಷ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಫಲಕ, ಶಾಲು ಒಳಗೊಂಡಂತೆ ವಿಶೇಷವಾಗಿ ಸನ್ಮಾನಿಸಲಾಗುವುದು. ವಾರ್ಷಿಕ ಪ್ರಶಸ್ತಿ ತಲಾ ₹10 ಸಾವಿರ ನಗದು ಹಾಗೂ ಪ್ರಶಸ್ತಿ ಒಳಗೊಂಡಿವೆ. ಫೆಬ್ರುವರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಬೆಂಗಳೂರು ಪ್ರೆಸ್‌ಕ್ಲಬ್‌ನ ಅಧ್ಯಕ್ಷ ಕೆ.ಸದಾಶಿವ ಶೆಣೈ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು