ಗುರುವಾರ , ಮೇ 26, 2022
26 °C

ಮೈಸೂರು: ಸಾಫ್ಟ್‌ವೇರ್ ಹ್ಯಾಕ್‌ ಮಾಡಿ ಬಿಟ್‌ ಕಾಯಿನ್‌ಗಾಗಿ ಬೇಡಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಟ್‌ ಕಾಯಿನ್‌-ಪ್ರಾತಿನಿಧಿಕ ಚಿತ್ರ

ಮೈಸೂರು: ಖಾಸಗಿ ಆಸ್ಪತ್ರೆಯೊಂದರ ಸರ್ವರ್‌ ಅನ್ನು ಹ್ಯಾಕ್‌ ಮಾಡಿ, ಬಿಟ್‌ಕಾಯಿನ್ ರೂಪದಲ್ಲಿ ಹಣ ನೀಡಲು ಹ್ಯಾಕರ್‌ಗಳು ಬ್ಲಾಕ್‌ಮೇಲ್‌ ಮಾಡಿರುವ ಕುರಿತು ಇಲ್ಲಿನ ನಗರ ಸೈಬರ್, ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧಗಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹ್ಯಾಕರ್‌ಗಳು ಮೊದಲಿಗೆ ಸರ್ವರ್‌ ಅನ್ನು ಹ್ಯಾಕ್ ಮಾಡಿ ದತ್ತಾಂಶ ತಿರುಚಿದರು. ಬಿಟ್‌ಕಾಯಿನ್‌ ರೂಪದಲ್ಲಿ ಹಣ ನೀಡಿದರೆ ತಿರುಚಿದ ದತ್ತಾಂಶಗಳನ್ನು ಮೊದಲಿನ ಸ್ಥಿತಿಗೆ ತರಲಾಗುವುದು ಎಂದು ಇ–ಮೇಲ್‌ ಕಳುಹಿಸಿದರು. ಆದರೆ, ದತ್ತಾಂಶಗಳನ್ನು ಆಸ್ಪತ್ರೆಯವರು ಹಾರ್ಡ್‌ಡಿಸ್ಕ್‌ನಲ್ಲಿ ಇರಿಸಿಕೊಂಡಿದ್ದರಿಂದ ನಷ್ಟವಾಗಿಲ್ಲ.

‘ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ’ ಹ್ಯಾಕರ್‌ಗಳ ಇ–ಮೇಲ್‌ ಐಡಿಯ ಡೊಮೈನ್‌ ಪತ್ತೆ ಹಚ್ಚುವ ಕಾರ್ಯ ನಡೆದಿದೆ’ ಎಂದು ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು