ಬುಧವಾರ, ಜನವರಿ 19, 2022
24 °C

ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಗೆ ಮನವಿ ಸಲ್ಲಿಸಲು ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಇಲ್ಲಿನ ಆದರ್ಶ ನಗರದ ಅವರ ನಿವಾಸದ ಮುಂದೆ ಮಂಗಳವಾರ ಬೆಳಿಗ್ಗೆಯಿಂದಲೇ ಸಾಕಷ್ಟು ಜನ ಸೇರಿದ್ದರು.

ಕೋವಿಡ್‌ ಭೀತಿಯ ಕಾರಣದಿಂದ ಸರ್ಕಾರ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಹೇಳಿದೆ. ಆದರೆ, ಮನವಿ ಸಲ್ಲಿಸಲು ಬಂದಿದ್ದ ವಿವಿಧ ಸಮಾಜದ ಮುಖಂಡರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಅದೆಲ್ಲವನ್ನೂ ಮರೆತಿದ್ದರು. ಖುದ್ದು ಮುಖ್ಯಮಂತ್ರಿಯವರನ್ನೇ ಭೇಟಿಯಾಗಿ ಮನವಿ ಕೊಡಲು ಸಾಕಷ್ಟು ಜನ ಕಾಯುತ್ತಿದ್ದರು. ಇನ್ನೂ ಕೆಲವರು ಸಿ.ಎಂ ಆಪ್ತ ಸಹಾಯಕರ ಭೇಟಿಗೆ ಅವಕಾಶ ಸಿಕ್ಕರೆ ಸಾಕು ಎಂದು ಪರದಾಡುತ್ತಿದ್ದ ಚಿತ್ರಣ ಕಂಡುಬಂತು.

ಬೊಮ್ಮಾಯಿ ಅವರು 9.30ಕ್ಕೆ ಮನೆಯಿಂದ ಹೊರಡುತ್ತಾರೆ ಎನ್ನುವ ವಿಷಯ ಮೊದಲೇ ತಿಳಿದಿದ್ದ ಅನೇಕರು ಬೆಳಿಗ್ಗೆ 7 ಗಂಟೆಯಿಂದಲೇ ಮನೆಮುಂದೆ ಜಮಾಯಿಸಿದ್ದರು. ಅನ್ನೂ ಅನೇಕ ಜನ ಅವರ ಮನೆಯ ಹೊರಾಂಗಣದಲ್ಲಿ ಅಂತರ ಮರೆತು ಕಾಯುತ್ತಿದ್ದರು. ನೂಕುನುಗ್ಗಲಿನ ನಡುವೆಯೇ ಮನೆಯಿಂದ ಹೊರಬಂದ ಮುಖ್ಯಮಂತ್ರಿ ಒಂದೆರಡು ನಿಮಿಷಗಳಲ್ಲಿ ಎಲ್ಲರಿಂದ ಮನವಿ ಸ್ವೀಕರಿಸಿ ಹೊರಟು ಹೋದರು.

ಇದನ್ನೂ ಓದಿ: ಸಿದ್ದರಾಮಯ್ಯರ ಇತ್ತೀಚಿನ ವರ್ತನೆಗಳಿಂದ ಭಾರೀ ಬೇಸರವಾಗುತ್ತಿದೆ: ಸಿಎಂ ಬೊಮ್ಮಾಯಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು