ಬುಧವಾರ, ಏಪ್ರಿಲ್ 21, 2021
23 °C

ಹಾಸನ: ಟಾಟಾ ಸುಮೊಗೆ ಹಿಂಬದಿಯಿಂದ ಕ್ವಾಲಿಸ್ ಡಿಕ್ಕಿ, ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಹೊರವಲಯದ ಕೆಂಚಟ್ಟಹಳ್ಳಿ ಬಳಿ ಟಾಟಾ ಸುಮೋಗೆ ಹಿಂಬದಿಯಿಂದ ಕ್ವಾಲಿಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ

ನಾಲ್ವರು ಮಹಿಳೆಯರು, ಮೂವರು ಮಕ್ಕಳು ಸೇರಿ 13 ಮಂದಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ.

ಹಂಪ್ ಇದ್ದ ಕಾರಣ ಟಾಟಾ ಸುಮೋ‌‌ ನಿಧಾನ ಮಾಡಿದಾಗ ಹಿಂಬದಿಯಿಂದ ಕ್ವಾಲಿಸ್ ವಾಹನ ಡಿಕ್ಕಿ ಹೊಡೆದಿದೆ.

ಕೆಜಿಎಫ್ ಮೂಲದ ಪ್ರದೀಪ್ ಕುಮಾರ್, ಪುನೀತ್, ನವೀನ್ ಕುಮಾರ್, ಸುನೀಲ್ ಕುಮಾರ್, ಚಂದ್ರಶೇಖರ್ ಮೃತರು. 

ಕ್ವಾಲಿಸ್ ವಾಹನದಲ್ಲಿ ಎಂಟು ಮಂದಿ ಕೆಜಿಎಫ್‌ನಿಂದ‌ ಉಡುಪಿಗೆ ಮದುವೆಗೆ ತೆರಳುತ್ತಿದ್ದರು. ಟಾಟಾ ಸುಮೋದಲ್ಲಿ ಹತ್ತು ಮಂದಿ 
ಕೋಲಾರದ ಮುಳಬಾಗಿಲಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದರು.

ಗಾಯಾಳುಗಳಿಗೆ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು