ಬೆಂಗಳೂರು: ಭಾರತ ವಿರೋಧಿ ವಿದೇಶಿ ಶಕ್ತಿಗಳ ಕೈಗೊಂಬೆಯಾಗಿರುವ ರಾಹುಲ್ ಗಾಂಧಿಯವರು, ಯಾರದ್ದೋ ತಾಳಕ್ಕೆ ಕುಣಿಯುತ್ತಾ, ಭಾರತದ ಮಾನವನ್ನು ವಿಶ್ವ ಮಟ್ಟದಲ್ಲಿ ಹರಾಜು ಹಾಕುವ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
#VideshiKaiGombe ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ವಿದೇಶಿ ನೆಲದಲ್ಲಿ ಕೂತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವ ರಾಹುಲ್ ಗಾಂಧಿಯವರನ್ನು ದೇಶದ್ರೋಹಿ ಎನ್ನದೆ ಮತ್ತೇನೆಂದು ಕರೆಯಬೇಕು. ಕುಂಬಳಕಾಯಿ ಕಳ್ಳ ಎಂದರೆ ರಾಹುಲ್ ಗಾಂಧಿಯವರು ಹೆಗಲು ಮುಟ್ಟಿ ನೋಡಿಕೊಳ್ಳುವುದು ಯಾಕೆ? ಎಂದು ಹೇಳಿದೆ.
ಭಾರತ ವಿರೋಧಿ ವಿದೇಶಿ ಶಕ್ತಿಗಳ ಕೈಗೊಂಬೆಯಾಗಿರುವ ರಾಹುಲ್ ಗಾಂಧಿಯವರು, ಯಾರದ್ದೋ ತಾಳಕ್ಕೆ ಕುಣಿಯುತ್ತಾ, ಭಾರತದ ಮಾನವನ್ನು ವಿಶ್ವ ಮಟ್ಟದಲ್ಲಿ ಹರಾಜು ಹಾಕುವ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ . ಜಾರ್ಜ್ ಸೋರೋಸ್ ಕೈಗೆ ನಿಮ್ಮ ಬುದ್ಧಿಯನ್ನು ಕೊಟ್ಟಿರುವುದು ದೇಶದ್ರೋಹವಲ್ಲದೆ ಮತ್ತೇನು? ಎಂದು ಕೇಳಿದೆ.
ಲೂಟಿಗಾಗಿ ರಾಜ್ಯವನ್ನು ಎಟಿಎಂ ಮೆಷಿನ್ ಮಾಡಿಕೊಳ್ಳಲು ಆಗಮಿಸಿರುವ ರಾಹುಲ್ ಗಾಂಧಿಯವರೇ, ಸುಳ್ಳು ಪುಕ್ಸಟ್ಟೆ ಗ್ಯಾರಂಟಿಗಳನ್ನು ಕೊಟ್ಟು ಹಿಮಾಚಲ ಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನದ ಜನರನ್ನು ವಂಚಿಸಿರುವುದು ಕರ್ನಾಟಕದ ಜನತೆಗೆ ತಿಳಿದಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ ಎಂದಿದೆ.
ರಾಹುಲ್ ಗಾಂಧಿಯವರೇ ಕನ್ನಡಿಗರು ಸ್ವಾಭಿಮಾನಿಗಳು ನಿಮ್ಮ ಪುಕ್ಸಟ್ಟೆ ಗ್ಯಾರಂಟಿಗಳಿಗೆ ತಲೆ ಬಾಗುವವರಲ್ಲ. ರಾಜ್ಯಕ್ಕೆ ಬಂದು ಜನರ ಕಿವಿ ಮೇಲೆ ಲಾಲ್‌ಬಾಗ್ ಇಡುವ ನಿಮ್ಮ ಪ್ರಯತ್ನಕ್ಕೆ ಜನತೆಯೇ ಉತ್ತರ ಕೊಡಲಿದ್ದಾರೆ ಕಾದು ನೋಡಿ ಎಂದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.