ಹುಬ್ಬಳ್ಳಿ/ಕಲಬುರ್ಗಿ: ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ, ಧಾರವಾಡ, ಹೊಸ ಪೇಟೆ, ಗದಗ, ವಿಜಯಪುರ, ಬೆಳಗಾವಿ ಜಿಲ್ಲೆಯ ವಿವಿಧೆಡೆ ಸೋಮವಾರ ಮಳೆಯಾಗಿದೆ. ಕಲಘಟಗಿ, ಅಳ್ನಾವರ ಭಾಗಗಳಲ್ಲಿ ಸಾಧಾರಣ, ಕಾರವಾರ, ಶಿರಸಿ, ಸಿದ್ದಾಪುರದಲ್ಲಿ ಮಧ್ಯಾಹ್ನ ಜೋರಾಗಿ ಮಳೆಯಾಗಿದೆ.
ಹಿರೇಬಾಗೇವಾಡಿ, ಗೋಕಾಕ, ರಾಮದುರ್ಗ, ಖಾನಾಪುರ, ಸವದತ್ತಿ, ಎಂ.ಕೆ. ಹುಬ್ಬಳ್ಳಿ ಹಾಗೂ ನಿಪ್ಪಾಣಿಯಲ್ಲೂ ಮಳೆಯಾಗಿದೆ.
ವಿಜಯಪುರ ನಗರ ಸೇರಿದಂತೆ ದೇವರ ಹಿಪ್ಪರಗಿ, ಸಿಂದಗಿ, ಬಸವನ ಬಾಗೇವಾಡಿ, ತಿಕೋಟಾ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ.
ಕಲಬುರ್ಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಸೋಮವಾರ ಮಳೆಯಾಯಿತು. ಕಲಬುರ್ಗಿ ನಗರ, ಚಿಂಚೋಳಿ, ಕಾಳಗಿ, ಸೇಡಂ, ಯಡ್ರಾಮಿ ತಾಲ್ಲೂಕುಗಳಲ್ಲಿ ಮಳೆಯಾಯಿತು. ರಾಯಚೂರು ನಗರ ಸೇರಿ ಜಿಲ್ಲೆಯ ಮಾನ್ವಿ ಹಾಗೂ ಸಿಂಧನೂರು ತಾಲ್ಲೂಕುಗಳಲ್ಲಿ ಮಳೆ ಸುರಿಯಿತು.
ಶಿವಮೊಗ್ಗ ವರದಿ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ಚುರುಕುಗೊಂಡಿದ್ದು, ಸೋಮವಾರವೂ ನಿರಂತರ ಮಳೆ ಸುರಿಯಿತು. ದಾವಣಗೆರೆ ನಗರ ಸೇರಿ ಸೇರಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ಹೊಸನಗರದಲ್ಲಿ 17.86 ಸೆಂ.ಮೀ, ತೀರ್ಥಹಳ್ಳಿಯಲ್ಲಿ 43.20 ಮಿ.ಮೀ, ಸಾಗರದಲ್ಲಿ 30 ಮಿ. ಮೀ, ಸೊರಬ 21.40 ಮಿ. ಮೀ, ಶಿಕಾರಿಪುರ 7.20 ಮಿ.ಮೀ, ಭದ್ರಾವತಿಯಲ್ಲಿ 4.80 ಮಿ.ಮೀ, ಶಿವಮೊಗ್ಗದಲ್ಲಿ 4 ಮಿ.ಮೀ ಮಳೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.