ಬೆಂಗಳೂರು: ಸಿಡಿ ಪ್ರಕರಣದ ಆರೋಪಿಯನ್ನು ಬಂಧಿಸದೇ ರಕ್ಷಿಸುತ್ತಿರುವ ಸರ್ಕಾರದ ನಡೆಯಿಂದ ಇಡೀ ರಾಜ್ಯ ತಲೆ ತಗ್ಗಿಸುವಂತಾಗಿದೆ ಎಂದು ಕಾಂಗ್ರೆಸ್ ದೂರಿದೆ.

ಅಲ್ಲದೆ ಅತ್ಯಾಚಾರ ಆರೋಪಿ ಹಾಗೂ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬಂಧಿಸುವಂತೆ ಒತ್ತಾಯಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ಸಿಡಿ ಪ್ರಕರಣದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಲಜ್ಜೆಗೇಡಿತನ, ಅಸಾಮರ್ಥ್ಯ, ಅತ್ಯಾಚಾರಿಗಳ ಪರವಾದ ಒಲವು, ಮಹಿಳಾ ವಿರೋಧಿ ನಿಲುವು ಎಲ್ಲವೂ ಬಯಲಾಗಿದೆ.

ಸಿಡಿ ಹೊರಬಂದಾಗಲೂ ರಾಜ್ಯದ ಮರ್ಯಾದೆ ಹರಾಜಾಗಿತ್ತು, ಈಗ ಆರೋಪಿಯನ್ನು ಬಂಧಿಸದೇ ರಕ್ಷಿಸುತ್ತಿರುವ ಸರ್ಕಾರದ ನಡೆಯಿಂದ ಇಡೀ ರಾಜ್ಯ ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿದೆ.

ಬಿಜೆಪಿ ಆಡಳಿತದಲ್ಲಿ ಎಲ್ಲವೂ ಉಲ್ಟಾ! ಇಲ್ಲಿ ಆರೋಪಿಗಳು ರಾಜಾರೋಷವಾಗಿ ತಿರುಗುತ್ತಾರೆ, ದೂರುದಾರರು, ಸಂತ್ರಸ್ತರು ತನಿಖೆ ಎದುರಿಸುತ್ತಾರೆ! ಆರೋಪಿಗಳು ಭಯ ಹುಟ್ಟಿಸುತ್ತಾರೆ, ಆದರೂ ಅವರನ್ನೇ ರಕ್ಷಿಸಲಾಗುತ್ತದೆ. ಕಾನೂನಿನ ಮೇಲಿರುವ ಜನರ ಭರವಸೆಯನ್ನು ಈ ಸರ್ಕಾರ ಹುಸಿಗೊಳಿಸುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

ರಾಜ್ಯ ಸರ್ಕಾರವು "ಯುಪಿ ಮಾಡೆಲ್" ಅನುಸರಿಸುತ್ತಿದೆ ಎಂದು ಆರೋಪಿಸಿದೆ. ಉತ್ತರಪ್ರದೇಶದಲ್ಲಿ ಕುಲದೀಪ್ ಸಿಂಗ್‌ನಿಂದ ಅತ್ಯಾಚಾರಕ್ಕೆ ಒಳಪಟ್ಟ ಸಂತ್ರಸ್ತೆಯನ್ನು ಯೋಗಿ ಸರ್ಕಾರ ನಡೆಸಿಕೊಂಡ ಮಾದರಿಯಲ್ಲೇ ಬಿಜೆಪಿ ಸರ್ಕಾರ ಸಿಡಿ ಯುವತಿಯನ್ನು ನಡೆಸಿಕೊಳ್ಳುತ್ತಿದೆ. ಯುಪಿಯಲ್ಲಾದಂತೆ ಇಲ್ಲೂ ಯುವತಿ ಜೀವಕ್ಕೆ ಅಪಾಯವಾಗುವ ಮುನ್ನ ಅತ್ಯಾಚಾರಿ ಆರೋಪಿಯನ್ನು ಬಂಧಿಸಿ ಎಂದು ಒತ್ತಾಯಿಸಿದೆ.

ಇದನ್ನೂ ಓದಿ:

ಸಿ.ಡಿ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ: ಮಾಧುಸ್ವಾಮಿ
ಸಿ.ಡಿ ಹಗರಣ ಈಗ 'ಹನಿಟ್ರ್ಯಾಪ್' ಸ್ವರೂಪ ಪಡೆಯುತ್ತಿದೆ: ಜೆಡಿಎಸ್
ಸದನದಲ್ಲಿ ಬೊಬ್ಬೆ ಹಾಕಿದ ಶೂರರು ಇಂದು ಮೌನವಾಗಿದ್ದೇಕೆ? ಬಿಜೆಪಿ ತಿವಿತ
ಸಿಡಿ ಸಂತ್ರಸ್ತೆ ನನ್ನನ್ನು ಭೇಟಿಯಾದರೆ ಸಹಾಯ ಮಾಡಲು ಸಿದ್ಧ: ಡಿ.ಕೆ.ಶಿವಕುಮಾರ್
ಸಿ.ಡಿ.ಪ್ರಕರಣ: ಯುವತಿ ಪೋಷಕರು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.