ಬುಧವಾರ, ಜೂನ್ 23, 2021
30 °C

ಸಿ.ಡಿ.ಪ್ರಕರಣ: ಸಂತ್ರಸ್ತೆ ಯುವತಿ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿ.ಡಿ. ಪ್ರಕರಣ ಯುವತಿ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎನ್ನಲಾಗಿದ್ದು, ಹೇಳಿಕೆ ದಾಖಲು ಪ್ರಕ್ರಿಯೆ ಆರಂಭವಾಗಿದೆ.

ಒಂದೇ ಕಾರಿನಲ್ಲೇ ಯುವತಿಯನ್ನು ನ್ಯಾಯಾಲಯ ಬಳಿ‌ ಕರೆತರಲಾಗಿದ್ದು, ನಂತರ ನಡೆದುಕೊಂಡು ಯುವತಿ‌ ನ್ಯಾಯಾಲಯದೊಳಗೆ ಹೋಗಿದ್ದಾರೆ. ಸದ್ಯ ಯುವತಿ, ನ್ಯಾಯಾಲಯದೊಳಗೆ ಇದ್ದಾರೆ.

ಈ ಬಗ್ಗೆ ಮಾತನಾಡಿದ ಯುವತಿ‌ ಪರ‌ ವಕೀಲ ಕೆ.ಎನ್. ಜಗದೀಶ್‌ಕುಮಾರ್, ‘ಯುವತಿ ನ್ಯಾಯಾಲಯದಲ್ಲಿ‌ ಇದ್ದಾರೆ. ಮಧ್ಯಾಹ್ನ 3ಕ್ಕೆ ಕಲಾಪ‌ ಆರಂಭವಾಗಿದ್ದು, ನ್ಯಾಯಾಧೀಶರೇ ಹೇಳಿಕೆ ದಾಖಲು ಮಾಡಿಕೊಳ್ಳಲಿದ್ದಾರೆ’ ಎಂದರು.

‘ಯುವತಿ‌ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ತಮಗಾದ ಅನ್ಯಾಯವನ್ನು ನ್ಯಾಯಾಲಯದ ಮುಂದೆ ಹೇಳಲಿದ್ದಾರೆ’ ಎಂದೂ ತಿಳಿಸಿದರು.

ಎಸ್ಐಟಿ ಮುಖ್ಯಸ್ಥ ಸೌಮೇಂದು‌ ಮುಖರ್ಜಿ, ಜಂಟಿ‌ ಕಮಿಷನರ್ ಸಂದೀಪ್ ಪಾಟೀಲ ಹಾಗೂ ಹಲವರೂ ನ್ಯಾಯಾಲಯಕ್ಕೆ‌ ಬಂದಿದ್ದಾರೆ.

ಇದನ್ನೂ ಓದಿ... ಯುವತಿ‌ ನಮಗೇ ಸಿಕ್ಕಿಲ್ಲ, ಸಿಆರ್‌ಪಿಸಿ 164 ಹೇಗೆ?: ನ್ಯಾಯಾಲಯಕ್ಕೆ ತನಿಖಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು