ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹುದ್ದೆಗಳ ಸೃಜನೆ: ಲೋಕಾಯುಕ್ತಕ್ಕೆ ಬಲ ತುಂಬಲು ಸಿದ್ಧತೆ

ಹೊಸ ಹುದ್ದೆಗಳ ಸೃಜನೆಗೆ ಪ್ರಸ್ತಾವ ಸಲ್ಲಿಸುವಂತೆ ಡಿಪಿಎಆರ್‌ ಸೂಚನೆ
Last Updated 9 ಅಕ್ಟೋಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತದ ಖಾಲಿ ಹುದ್ದೆಗಳ ಭರ್ತಿ ಜತೆಯಲ್ಲೇ ಸಂಸ್ಥೆಗೆ ಹೆಚ್ಚಿನ ಬಲ ತುಂಬಲು ಹೊಸ ಹುದ್ದೆಗಳನ್ನು ಸೃಜಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ. ಈ ಸಂಬಂಧ ಪ್ರಸ್ತಾವ ಸಲ್ಲಿಸಲು ಡಿಪಿಎಆರ್‌ ಅಧಿಕಾರಿಗಳು ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ.

ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988ರ ಅಡಿ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲು ನೀಡಿದ್ದ ಅಧಿಕಾರವನ್ನು 2016ರಲ್ಲಿ ಹಿಂಪಡೆಯಲಾಗಿತ್ತು. ಆ ಬಳಿಕ ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇದ್ದವು.

ಆಗಸ್ಟ್‌ 11ರ ಹೈಕೋರ್ಟ್‌ ಆದೇಶ
ದಂತೆ ಎಸಿಬಿಯನ್ನು ರದ್ದುಗೊಳಿಸಿ, ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಪೊಲೀಸ್‌ ಠಾಣೆಗಳ ಸ್ಥಾನಮಾನ ನೀಡಿ ಸೆಪ್ಟೆಂಬರ್‌ 9ರಂದು ಆದೇಶ ಹೊರಡಿಸಲಾಗಿತ್ತು. ಎಸಿಬಿಯಲ್ಲಿ ತನಿಖಾ ಹಂತದಲ್ಲಿರುವ ಎಲ್ಲ ಪ್ರಕರಣಗಳು, ದೂರುಗಳನ್ನು ಲೋಕಾಯುಕ್ತಕ್ಕೆ ವರ್ಗಾ
ಯಿಸಲು ಡಿಪಿಎಆರ್‌ ಆದೇಶಿಸಿತ್ತು.

ಲೋಕಾಯುಕ್ತ ಪೊಲೀಸ್‌ ವಿಭಾಗದಲ್ಲಿ 534 ಹುದ್ದೆಗಳ ಮಂಜೂರಾತಿ ಇದೆ. ಒಂದು ಐಜಿಪಿ, ಮೂರು ಎಸ್‌ಪಿ, ಐದು ಡಿವೈಎಸ್‌ಪಿ, 10 ಇನ್‌ಸ್ಪೆಕ್ಟರ್‌ ಸೇರಿ ಕೆಲ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿ ಜತೆಗೆ ಎಸಿಬಿಯಲ್ಲಿರುವ 322 ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೂ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ವರ್ಗಾಯಿಸುವಂತೆ ಲೋಕಾಯುಕ್ತರು ಕೋರಿದ್ದರು.

ಮೂಡದ ಸಹಮತ: ಅಧಿಕಾರಿಗಳು ಮತ್ತು ಸಿಬ್ಬಂದಿ ಹಂಚಿಕೆಗೆ ಸಂಬಂಧಿಸಿದಂತೆ ಡಿಪಿಎಆರ್‌ ಕಾರ್ಯದರ್ಶಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಮತ್ತು ಲೋಕಾಯುಕ್ತದ ಹಿರಿಯ ಅಧಿಕಾರಿಗಳು ಹಲವು ಸುತ್ತಿನ ಚರ್ಚೆ ನಡೆಸಿದ್ದರು. ಆದರೆ, ಎಸಿಬಿ ಪೊಲೀಸ್‌ ಘಟಕವನ್ನು ಸಮಗ್ರವಾಗಿ ಲೋಕಾಯುಕ್ತದಲ್ಲಿ ವಿಲೀನಗೊಳಿಸುವ ಬೇಡಿಕೆ ಕುರಿತು ಸಹಮತ ಮೂಡಿರಲಿಲ್ಲ.

‘ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲೂ ಚರ್ಚೆ ನಡೆದಿತ್ತು. ‘ಎಸಿಬಿಯ ಪೊಲೀಸ್‌ ಬಲವನ್ನು ಪೂರ್ಣವಾಗಿ ವಿಲೀನಗೊಳಿಸುವ ಅಗತ್ಯವಿಲ್ಲ’ ಎಂಬ ವಾದವನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಮಂಡಿಸಿದ್ದರು. ಈ ಕಾರಣದಿಂದಾಗಿಯೇ ವಿಲೀನದ ಪ್ರಸ್ತಾವವನ್ನು ಕೈಬಿಡಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶೀಘ್ರದಲ್ಲಿಯೇ ಪ್ರಸ್ತಾವ ಸಲ್ಲಿಕೆ’

‘ಲೋಕಾಯುಕ್ತದ ಆಡಳಿತ ಮತ್ತು ವಿಚಾರಣೆ, ಪೊಲೀಸ್‌ ಹಾಗೂ ತಾಂತ್ರಿಕ ವಿಭಾಗಗಳಲ್ಲಿ ಹೊಸ ಹುದ್ದೆಗಳನ್ನು ಸೃಜಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸ್‌ ವಿಭಾಗದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಹ ಅಧಿಕಾರಿಗಳ ಪಟ್ಟಿ ಕಳುಹಿಸಲು ಸೂಚನೆ ಬಂದಿದೆ. ಶೀಘ್ರ ಅದನ್ನು ಕಳುಹಿಸಲಾಗುವುದು’ ಎಂದರು.

ಹಸ್ತಾಂತರ

ಅಧಿಕಾರಿಗಳು ಮತ್ತು ಸಿಬ್ಬಂದಿ ವಿಲೀನದ ಬೇಡಿಕೆ ಇತ್ಯರ್ಥವಾಗದ್ದರಿಂದ ಎಸಿಬಿಯಲ್ಲಿರುವ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯೂ ವಿಳಂಬವಾಗಿತ್ತು.‌ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿ ಕೆಲವು ಜಿಲ್ಲೆಗಳಲ್ಲಿ
ಈ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT