ಗುರುವಾರ , ಜೂನ್ 30, 2022
25 °C
ನನ್ನ ಬಳಿ ಇರುವುದು ಕಾಮಗಾರಿಗಳಿಗೆ ಸಹಿ ಮಾಡಿಸಿದ ಪತ್ರವಲ್ಲ

‘ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಿದ್ದು ಮರೆತುಹೋಯ್ತಾ?’–ರೇಣುಕಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ‘ನನ್ನ ಬಳಿ ಇರುವುದು ಯಾವುದೋ ಕಾಮಗಾರಿಗಳಿಗೆ ಸಹಿ ಮಾಡಿಸಿದ ಪತ್ರವಲ್ಲ. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿ ಮುಂದುವರಿಯುವಂತೆ 65ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿದ ಪತ್ರ. ನನ್ನನ್ನು ಯಡಿಯೂರಪ್ಪನವರ ವಿರುದ್ಧ ಎತ್ತಿಕಟ್ಟಿದ್ದು ಮರೆತು ಹೋಯ್ತಾ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಸಚಿವ ಈಶ್ವರಪ್ಪ ವಿರುದ್ಧ ಹರಿಹಾಯ್ದರು.

ತಾಲ್ಲೂಕಿನ ಅರಬಗಟ್ಟೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನದು ಹುಲಿವೇಷ ಎಂದು ವಿನಾಕಾರಣ ನನ್ನ ಹೆಸರನ್ನು ತಂದು ಸಹಿ ಸಂಗ್ರಹದ ಕುರಿತು ಮಾತನಾಡಿದ್ದೀರಿ. ಚುನಾವಣಾ ಪೂರ್ವದಲ್ಲಿ ನೀವು ಏನು ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ನೀವು ರಾಜ್ಯಪಾಲರಿಗೆ ಪತ್ರ ಬರೆದಿದ್ದಿರಲ್ಲ, ಅದು ಯಾವ ಕಾರಣಕ್ಕಾಗಿ. ನಾವು ಏನಾದರೂ ಮಾತನಾಡಿದರೆ ವರಿಷ್ಠರು ಸಹಿಸೋಲ್ಲ ಎಂದು ಹೇಳಿದ್ದೀರಿ. ನಮಗೊಂದು ನ್ಯಾಯ, ನಿಮಗೊಂದು ನ್ಯಾಯವಾ’ ಎಂದು ಪ್ರಶ್ನಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು