ಸೋಮವಾರ, ನವೆಂಬರ್ 30, 2020
19 °C

ಗಲಭೆಗೆ ಕಾಂಗ್ರೆಸ್ ಸಂಚು: ಮುನಿರತ್ನ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಗಲಭೆ ಸೃಷ್ಟಿಸಲೆಂದೇ ಕಾಂಗ್ರೆಸ್‌ ಪಕ್ಷ ನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ಹೊರಗಿನಿಂದ ಆರ್‌.ಆರ್‌.ನಗರಕ್ಕೆ ಕರೆತಂದಿದೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಆರೋಪಿಸಿದ್ದಾರೆ.

‘ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿ ಜನರಲ್ಲಿ ಗೊಂದಲ ಮೂಡಿಸುವ ಕಾರ್ಯಕ್ಕೂ ಕೈಹಾಕಿದ್ದಾರೆ. ಈ ಮೂಲಕ ನನ್ನ ಮೇಲೆ ಆರೋಪ ಹೊರಿಸಿ, ಕಾಂಗ್ರೆಸ್‌ನವರು ಅನುಕಂಪ ಗಿಟ್ಟಿಸಲು ಸಂಚು ನಡೆಸಿದ್ದಾರೆ’ ಎಂದು ಅವರು ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಪ್ರಜ್ಞಾವಂತರು, ಬುದ್ಧಿವಂತರು ಮತ್ತು ಸುಶಿಕ್ಷಿತರು ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಷಡ್ಯಂತ್ರ ರೂಪಿಸುತ್ತಿದೆ. ಅಕ್ರಮಗಳನ್ನು ನಡೆಸಿ ಅದನ್ನು ನಮ್ಮ ತಲೆಗೆಕಟ್ಟಿ ತಾವು ಒಳ್ಳೆಯವರು, ಬಿಜೆಪಿಯವರು ಕೆಟ್ಟವರು ಎಂದು ಬಿಂಬಿಸಿ ಅನುಕಂಪದ ಮತಗಳನ್ನು ಗಿಟ್ಟಿಸಲು ಕುತಂತ್ರ ಮಾಡಿದ್ದಾರೆ’ ಎಂದು ಹರಿಹಾಯ್ದರು.

ಕಂದಾಯ ಸಚಿವ ಆರ್‌.ಅಶೋಕ ಮಾತನಾಡಿ, ಕಾಂಗ್ರೆಸ್‌ ಮುಖಂಡರು ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಚುನಾವಣಾ ಗುರುತಿನ ಚೀಟಿಗಳ ಮಾಹಿತಿ ಮತ್ತು ಗುರುತಿನ ಚೀಟಿ ಸಂಖ್ಯೆಯನ್ನು ಸಂಗ್ರಹಿಸುತ್ತಿರುವುದು ಯಾವ ಕಾರಣಕ್ಕೆ? ಈ ರೀತಿ ವಿವರ ಸಂಗ್ರಹಿಸುವುದು ಅಪರಾಧ ಎಂದು ಚುನಾವಣಾ ಆಯೋಗ ಈಗಾಗಲೇ ತಿಳಿಸಿದೆ. ಮತದಾರರು ಯಾವುದೇ ಕಾರಣಕ್ಕೂ ಮಾಹಿತಿ ನೀಡಬಾರದು ಎಂದು ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು